Thursday, March 12, 2026
Flats for sale
Homeಜಿಲ್ಲೆಪುತ್ತೂರು : ವಿದ್ಯಾರ್ಥಿನಿಯ ಕೈಗೆ ಚಾಕುವಿನಿಂದ ಇರಿದ ಸಹಪಾಠಿ..!

ಪುತ್ತೂರು : ವಿದ್ಯಾರ್ಥಿನಿಯ ಕೈಗೆ ಚಾಕುವಿನಿಂದ ಇರಿದ ಸಹಪಾಠಿ..!

ಪುತ್ತೂರು : ಹಿಂದೂ ವಿದ್ಯಾರ್ಥಿಯೋರ್ವ ಮುಸ್ಲಿಂ ವಿದ್ಯಾರ್ಥಿನಿಯ ಕೈಗೆ ಚಾಕುವಿನಿಂದ ಇರಿದ ಘಟನೆ ಕೊಂಬೆಟ್ಟು ಶಾಲಾ ವ್ಯಾಪ್ತಿ ಪುತ್ತೂರಿನಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಪುತ್ತೂರು ಪೊಲೀಸರು ಸಿ ಸಿ ಟಿವಿ ಪರಿಶೀಲನೆ ನಡೆಸಿದ್ದು, ಚೂರಿ ಇರಿದ ಶಾಲಾ ವಿದ್ಯಾರ್ಥಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಚೂರಿ ಇರಿಯಲಾಗಿದೆ ಎಂಬ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.

ವಿದ್ಯಾರ್ಥಿನಿಯ ಕೈಯಲ್ಲಿ ರಕ್ತ ಬರುವುದನ್ನು ಗಮನಿಸಿದ ಅದೇ ಶಾಲಾ ಪ್ರಾಂಶುಪಾಲ ಕೈಗೆ ಗ್ಲಾಸು ಬಿದ್ದು ಗಾಯಗೊಂಡಿದೆ ಎಂದು ತಪ್ಪು ಮಾಹಿತಿ ನೀಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ ಕೊಟ್ಟಿದ್ದಾರೆ ಎಂದು ವೀಡಿಯೋದಲ್ಲಿ ವಿದ್ಯಾರ್ಥಿನಿ ಹೇಳಿದ್ದಾಳೆ. ಪುತ್ತೂರಿನಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಪುತ್ತೂರು ಟೌನ್ ಠಾಣೆ ಪೊಲೀಸರು ದೌಡಾಯಿಸಿದ್ದು, ಜನರ ಮನವೊಲಿಸಿ ಆಸ್ಪತ್ರೆ ಆವರಣದಿಂದ ಹೊರಗೆ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular