Friday, November 22, 2024
Flats for sale
Homeರಾಜಕೀಯಬೆಂಗಳೂರು : ಮೂಡ ಹಗರಣ : ಸುಪ್ರೀಂಕೋರ್ಟ್​ ಆದೇಶ ಉಲ್ಲೇಖಿಸಿ ತನಿಖೆಗೆ ಅನುಮತಿ, CBI ಎಂಟ್ರಿ...

ಬೆಂಗಳೂರು : ಮೂಡ ಹಗರಣ : ಸುಪ್ರೀಂಕೋರ್ಟ್​ ಆದೇಶ ಉಲ್ಲೇಖಿಸಿ ತನಿಖೆಗೆ ಅನುಮತಿ, CBI ಎಂಟ್ರಿ !?

ಬೆಂಗಳೂರು : ಭಾಗ್ಯಗಳ ಸರ್ದಾರ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯರ ಸುದೀರ್ಘ ರಾಜಕೀಯ ಜೀವನದ ಮೇಲೆ ಕರಿಮೋಡಗಳ ಛಾಯೆ ಆವರಿಸಿದೆ. ಮುಡಾ ಎಂಬ ಹಗರಣ ಸಿದ್ದರಾಮಯ್ಯರ ಮೂಡನ್ನೇ ಹಾಳು ಮಾಡಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಕೊಟ್ಟ ಅನುಮತಿಯಿಂದ ಸಿದ್ದು ರಾಜಕೀಯ ಸಂಧ್ಯಾಕಾಲದಲ್ಲಿ ತೀವ್ರ ಇರುಸುಮುರಿಸು ಸೃಷ್ಟಿಸಿದೆ. ದಶಕಗಳ ಕಾಲ ಕಟ್ಟಿದ ಚರಿತ್ರೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತಾಗಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 40 ವರ್ಷಗಳು.. 4 ದಶಕಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಮೇಲೆ ಯಾವುದೇ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಭಾಗ್ಯಗಳ ಸರ್ದಾರ.. ಅನ್ನರಾಮಯ್ಯ, ಅಹಿಂದರಾಮಯ್ಯ, ಗ್ಯಾರಂಟಿರಾಮಯ್ಯ.. ಹೀಗೆ ತಮ್ಮ ಹಿಂಬಾಲಕರಿಂದ, ಅಭಿಮಾನಿಗಳಿಂದ ತರಹೇವಾರಿ ಬಿರುದುಗಳಿಂದ ಕರೆಸಿಕೊಂಡ ಧೀಮಂತ ನಾಯಕ ಸಿದ್ದರಾಮಯ್ಯ. ಆದ್ರೆ ಶ್ವೇತವರ್ಣದ ಬಟ್ಟೆ ಮೇಲೆ ಬಿದ್ದ ಕಪ್ಪು ಮಸಿಯೇ ಎದ್ದು ಕಾಣುವಂತೆ ಈಗ ಈ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತಳುಕುಹಾಕಿಕೊಂಡಿದೆ. ಮಾತ್ರವಲ್ಲದೆ ಸಿಎಂ ಕುರ್ಚಿ ಅಲುಗಾಡುತ್ತಿದೆ.

ಸಿದ್ದರಾಮಯ್ಯ ಮೇಲೆ ಪರಿಣಾಮಗಳೇನು?

ಇಲ್ಲದ ಜಮೀನನ್ನು ಕೃಷಿ ಭೂಮಿ ಅಂತ ಸಿದ್ದರಾಮಯ್ಯ ನೋಂದಣಿ
ಪರಿಹಾರ ರೂಪದ ನಿವೇಶನ ಬಿಡಬೇಕಾದ ಸಂದರ್ಭ ಸೃಷ್ಟಿ ಸಾಧ್ಯತೆ
ಸಿಎಂ ಸಿದ್ದರಾಮಯ್ಯಗೆ ಎಲ್ಲವನ್ನೂ ಎದುರಿಸಬೇಕಾದ ಅನಿವಾರ್ಯತೆ
ಸಿದ್ದರಾಮಯ್ಯಗೆ ಕಳಂಕ ರಹಿತ ರಾಜಕೀಯ ನಿವೃತ್ತಿ ಸಿಗದಿರಬಹುದು
ರಾಜಕೀಯವಾಗಿ ಸಿಎಂ ಸಿದ್ದರಾಮಯ್ಯರ ವರ್ಚಸ್ಸು ಕುಂಠಿತ ಸಾಧ್ಯತೆ
ರಾಜಕೀಯದಿಂದ ನಿವೃತ್ತರಾದ್ರೂ ಪಕ್ಷದ ಮೇಲಿನ ಹಿಡಿತ ಕೈತಪ್ಪಬಹುದು
ಕುಟುಂಬದ ರಕ್ಷಣೆಗಾಗಿ ಸಿದ್ದರಾಮಯ್ಯಗೆ ದೀರ್ಘ ಹೋರಾಟ ಅನಿವಾರ್ಯ
ಪುತ್ರನ ರಾಜಕೀಯ ಭವಿಷ್ಯದ ಮೇಲೂ ಕೇಸ್​ ಪರಿಣಾಮ ಬೀರಬಹುದು
ಸ್ವಪಕ್ಷದಲ್ಲಿಯೇ ಸಿಎಂ ಸಿದ್ದರಾಮಯ್ಯ ಅಸಮಾಧಾನ ಎದುರಿಸಬೇಕಾಗುತ್ತೆ
ಸಿಎಂ ಹಿಂದುಳಿದ ವರ್ಗದ ಚಾಂಪಿಯನ್ ಪಟ್ಟಕ್ಕೆ ಧಕ್ಕೆ ಉಂಟಾಗಬಹುದು.

ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ವರದಿಯ ಅನುಸಾರವಾಗಿ ಗವರ್ನರ್​ ಪ್ಯಾಸಿಕ್ಯೂಷನ್​ಗೆ ಪರ್ಮಿಷನ್ ನೀಡಿದ್ದಾರೆ. ಸದ್ಯ ಗೌವರ್ನರ್​ ಕೊಟ್ಟಿರುವ ಅನುಮತಿಯಲ್ಲಿರುವ ಅಂಶಗಳು ಏನೆಂದು ನೋಡವುದಾದರೆ..

ಪಿಸಿ ಆ್ಯಕ್ಟ್ ಸೆಕ್ಷನ್​ 17ಎ ಮತ್ತು ಬಿಎನ್ಎಸ್ಎಸ್ 218 ಅನುಮತಿ
ಮೂರು ದೂರಗಳನ್ನು ಆಧರಿಸಿದ ಗೌವರ್ನರ್​ ಅನುಮತಿ
ಸಿದ್ದರಾಮಯ್ಯ ವಿರುದ್ಧ ಇನ್ವೆಸ್ಟಿಗೇಷನ್ ಸ್ಯಾಕ್ಷನ್ ನೀಡಲಾಗಿದೆ

ಭ್ರಷ್ಟಚಾರ ತಡೆ ಕಾಯ್ದೆ 17ಎ, 19 & ಬಿಎನ್ಎಸ್​ಎಸ್ 218ಗೆ ಅನುಮತಿ
ಭಷ್ಟಚಾರ ತಡೆ ಕಾಯ್ದೆ 7,9,12 & 15 ರಡಿ ಆರೋಪಕ್ಕೆ ಅನುಮತಿ
ಸೆ. 59,61,62,201,227,228,229,314,316(5),318(2)318(3) ಅಂಶಗಳಿವೆ
ಜೊತೆಗೆ 319,322,324,324(1)324(2) 324(2) 335,336,338 & 340 BNS ಅಂಶಗಳು ಅನುಮತಿಯಲ್ಲಿವೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಹೆಸರು ಕೇಳಿಬಂದಿತ್ತು. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಈ ಕುರಿತಾಗಿ ಗವರ್ನರ್​ಗೆ ದೂರು ಸಲ್ಲಿಸಿದ್ದರು. ಆದರೀಗ ಈ ದೂರಿನ ಅನ್ವಯ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಗವರ್ನರ್ ಅನುಮತಿ ನೀಡಿದ್ದಾರೆ.

ಮುಡಾ ಹಗರಣದ ಪ್ರಾಸಿಕ್ಯೂಷನ್​ನಿಂದ ಬಚಾವಾಗಲು ಸಿಎಂ ಸಿದ್ದರಾಮಯ್ಯನವರ ಲೀಗಲ್ ಟೀಂ ಈಗಾಗಲೇ ಸಜ್ಜಾಗಿದೆ. ಸಿದ್ದರಾಮಯ್ಯ ಪರವಾಗಿ ರಿಟ್ ಅರ್ಜಿ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಸಿದ್ದು ಲೀಗಲ್ ಟೀಂ ಮಾಡಿಕೊಂಡಿತ್ತು. ಸೀನಿಯರ್ ಪೊನ್ನಣ್ಣ ಅವರು ರಿಟ್ ಅರ್ಜಿ ಸಲ್ಲಿಸಿ, ರಾಜ್ಯಪಾಲರು ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲು ಮುಂದಾಗಿದ್ದರು. ಆದ್ರೆ ಈಗ ಅದಕ್ಕೂ ಕೂಡ ಕಂಟಕ ಬಂದಿದೆ.

ಸಿಎಂ ಸಿದ್ದರಾಮಯ್ಯನ ಲೀಗಲ್ ಟೀಂ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸುವ ಮುನ್ನವೇ ದೂರುದಾರ ಪ್ರದೀಪ್​ ಕುಮಾರ್ ಅವರು ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ. ರಿಟ್ ಅರ್ಜಿ ಸಲ್ಲಿಕೆ ಮಾಡಿದ್ರೆ ನಮ್ಮ ವಾದವನ್ನೂ ಕೂಡ ಕೇಳಬೇಕು. ನಮ್ಮ ವಾದವನ್ನು ಆಲಿಸಿದ ಬಳಿಕವೇ ತೀರ್ಪು ನೀಡಬೇಕು ಎಂದು ಮನವಿಯನ್ನು ಮಾಡಲಾಗಿದೆ. ಈ ಮೂಲಕ ಹೈಕೋರ್ಟ್​​ನಲ್ಲಿ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ.

ಸಿಬಿಐ ಎಂಟ್ರಿ ಆಗ್ತಾರಾ ? ಸಿ ಎಂ ಸಿದ್ದರಾಮಯ್ಯ ರಾಜೀನಾಮೆ ಕೊಡದಿದ್ದರೆ ಈ ಕೇಸ್ ಅನ್ನು ಸಿಬಿಐ ಗೆ ಒಪ್ಪಿಸುವ ಸಂಭವವಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮೂಡ ಹಗರಣ ಸಿ ಎಂ ಸಿದ್ದರಾಮಯ್ಯಗೆ ಯಾವರೀತಿ ಪರಿಣಾಮ ಬೀಳುತ್ತೆ ಎಂಬುದನ್ನು ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular