ಶಿವಮೊಗ್ಗ : ಸಾಕು ನಾಯಿ ಕಚ್ಚಿ ಸಾಯುವುದು ಕೇಳಿದ್ದೇವೆ ಆದರೆ ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಳಘಟ್ಟದಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ಮಹಿಳೆಗೆ ಬೆಕ್ಕು ಕಚ್ಚಿತ್ತು, ಕಚ್ಚಿದ ಪರಿಣಾಮ ಮಹಿಳೆ ಕಾಲಿಗೆ ಐದು ಇಂಜೆಂಕ್ಷನ್ ತೆಗೆದುಕೊಳ್ಳಬೇಕಿತ್ತು. ಒಂದು ಇಂಜೆಕ್ಷನ್ ಪಡೆದು ಹುಷಾರಾದ ಕಾರಣ ಮಹಿಳೆ ಚೇತರಿಕೆ ಕೊಂಡಿದ್ದು ಬಳಿಕ ಯಾವುದೇ ಔಷದಿ ಪಡೆಯದೇ ಸುಮ್ಮನಾಗಿದ್ದರು.ಬೆಕ್ಕು ಅಂತ ನೆಗ್ಲಿಗೆನ್ಸ್ ಮಾಡಿದ್ದರು. ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿ ಯುವನೋರ್ವನ ಮೇಲೆ ಬೆಕ್ಕು ದಾಳಿಮಾಡಿದ್ದು ಬಳಿಕ ತರಲಘಟ್ಟ ಕ್ಯಾಂಪ್ ನಲ್ಲಿ ಸಾಕಿದ ಬೆಕ್ಕು ಕಚ್ಚಿ ಗಂಗೀಬಾಯಿ (50) ಎಂಬ ಮಹಿಳೆಗೆ ಕಚ್ಚಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾಕಿದ ಪ್ರಾಣಿನೇ ಜವರಾಯನಾಗಿ ಕಾಡಿದ್ದು ದೊಡ್ಡ ವಿಪರ್ಯಾಸ ವೆಂದು ಸ್ಥಳೀಯರು ಹೇಳಿದ್ದಾರೆ.
ಹಲವು ದಿನಗಳ ಹಿಂದೆ ಬೆಕ್ಕು ಕಚ್ಚಿದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ರೇಬೀಸ್ ಹಬ್ಬಿದ್ದು, ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ನಿನ್ನೆ ಮೃತಪಟ್ಟಿದ್ದಾರೆ.
ಇದೇ ಬೆಕ್ಕು ಮೊದಲು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವಕನೋರ್ವನ ಮೇಲೆ ದಾಳಿ ಮಾಡಿತ್ತು. ಎರಡು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಕಚ್ಚಿತ್ತು. ಯಜಮಾನಿಯನ್ನು ಕಚ್ಚುವ ಮುನ್ನ ನಾಯಿಯ ಮರಿಯನ್ನೂ ಕಚ್ಚಿತ್ತು. ಯುವಕನ ಕಾಲಿಗೆ ಔಷಧ ಮಾಡಿ ನಂಜು ತೆಗೆಸಲಾಗಿತ್ತು. ಪರಿಣಾಮ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಘಟನೆಯ ಬಗ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ ತಿಮ್ಮಪ್ಪ ಪ್ರತಿಕ್ರಿಯಿಸಿದ್ದು, ನಾಯಿಯು ಬೆಕ್ಕಿಗೆ ಕಚ್ಚಿರಬೇಕು. ನಾಯಿಯ ರೇಬಿಸ್ ಮಹಿಳೆಗೆ ಕಚ್ಚಿದ ಬೆಕ್ಕಿಗೆ ಬಂದಿದೆ. ಅದೇ ಬೆಕ್ಕು ಮಹಿಳೆಗೆ ಕಚ್ಚಿದೆ. ಇದರಿಂದ ಮಹಿಳೆಯು ಮೃತಪಟ್ಟಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಯಿಯು ಈ ಬೆಕ್ಕಿಗೆ ಕಚ್ಚಿದ್ದರಿಂದ ರೇಬಿಸ್ ಹರಡಿದ್ದು, ಬಳಿಕ ಬೆಕ್ಕು ಮನೆ ಒಡತಿಗೆ ಕಚ್ಚಿದೆ. ಹೀಗಾಗಿ ಮಹಿಳೆ ರೇಬಿಸ್ನಿಂದ ಮೃತಪಟ್ಟಿದ್ದಾಳೆಂದು ಶಂಕಿಸಲಾಗಿದೆ.


