Sunday, November 24, 2024
Flats for sale
Homeರಾಜ್ಯಬೆಂಗಳೂರು : ಸಿಸಿಬಿ ಪೊಲೀಸ್ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ.

ಬೆಂಗಳೂರು : ಸಿಸಿಬಿ ಪೊಲೀಸ್ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ.

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಹಲವು ಸರಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡುತ್ತಿರುವ ಘಟನೆ ನಡೆಯುತ್ತಲೇ ಇದೆ. ಪಿಎಸ್ಐ ಪರಶುರಾಮ್ ಸಾವು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್​​ಪೆಕ್ಟರ್​ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಗಚಗುಪ್ಪೆ ಬಳಿ ಮರವೊಂದಕ್ಕೆ ನೇಣುಬಿಗಿದುಕೊಂಡು ಪ್ರಾಣವನ್ನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಇನ್ಸಪೆಕ್ಟರ್ ತಿಮ್ಮೇಗೌಡ. ಕಳೆದ 15 ದಿದನದ ಹಿಂದೆ ಸಿಸಿಬಿಗೆ ವರ್ಗಾವಣೆಯಾಗಿದ್ದರು. ಪೋಸ್ಟಿಂಗ್ ವಿಚಾರಕ್ಕೆ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ್ರ? ಕಳೆದ ಒಂದು ವರ್ಷದಿಂದ ಪೋಸ್ಟಿಂಗ್‌ಗಾಗಿ ಅಲೆದಾಡಿದ್ದ ತಿಮ್ಮೇಗೌಡ ಪಟಾಕಿ ಗೋದಾಮಿನಲ್ಲಿ ಬೆಂಕಿ ಬಿದ್ದು ಹಲವು ಸಾವನ್ನಪ್ಪಿದ್ದರು. ಈ ವೇಳೆ ಕರ್ತವ್ಯ ಲೋಪ ಆರೋಪದಡಿ ತಿಮ್ಮೇಗೌಡರನ್ನ ಅಮಾನತ್ತು ಮಾಡಲಾಗಿತ್ತು. ಪಟಾಕಿ ದುರಂತದ ಬಳಿಕ ಸಸ್ಪೆಂಡ್ ಆಗಿದ್ದ ಇನ್ಸ್ಪೆಕ್ಟರ್.. ಸಸ್ಪೆಂಡ್ ಬಳಿಕ ಕೆಲಸವಿಲ್ಲದೆ ದಿನನಿತ್ಯ ಕಮಿಷನರ್ ಆಫೀಸ್, ಡಿಜಿ ಕಚೇರಿಗೆ ಅಲೆದಾಡಿದ್ದ ಇನ್ಸಪೆಕ್ಟರ್ ತಿಮ್ಮೇಗೌಡ. ಕೆಲ ಅಧಿಕಾರಿಗಳು ಸಮಾಧಾನ ಮಾಡುತ್ತಿದ್ದರು. ಆದರೂ ಸಸ್ಪೆಂಡ್ ಆಗಿದ್ದರಿಂದ ನೊಂದುಹೋಗಿದ್ದರು. ಇದರಿಂದಲೇ ಕೊನೆಗೆ ಸಾವಿಗೆ ತೀರ್ಮಾನ ಮಾಡಿ ಇಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular