ಬೆಂಗಳೂರು : ವರ್ಗಾವಣೆ ದಂದೆ ಅಂತೂ ಸಹಜ ಆದ್ರೆ ರಾಜ್ಯದಲ್ಲಿ ಭಾಗ್ಯಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿತುಳುಕಿದೆ. ಕೇವಲ MLA ಗಳ PA ಗಳದ್ದೇ ಕಾರುಬಾರು ಅವರು ಹೇಳಿದ್ದೆ ರೇಟ್ ,ಅವರು ಮಾಡಿದ್ದೆ ಫೈನಲ್ ಅಂತಹ ಪರಿಸ್ಥಿತಿ ರಾಜ್ಯದಲ್ಲಿದೆ.
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಹೇಗೆ ಸಾಧ್ಯ ಹೇಳಿ .ಒಬ್ಬ ಅಧಿಕಾರಿ ಒಂದು ಸ್ಟೇಷನ್ ಇಷ್ಟೊಂದು ಹಣಕೊಟ್ಟು ಬಂದು ಆ ಹಣವನ್ನು ಹಿಂಪಡೆಯದೆ ಹೋಗ್ತಾರೋ ? ಅದಗೋಸ್ಕರ ಅಕ್ರಮ ಚಟುವಟಿಕೆ ಗಳಿಂದ ಪೊಲೀಸ್ ಇಲಾಖೆ ಹಣ ಪಡೆಯದೇ ಇರುತ್ತಾರೋ ? ಇದೆಲ್ಲ ಎಲ್ಲರಿಗೂ ತಿಳಿದ ವಿಚಾರ ಸಮಾಜದಲ್ಲಿ ನಡೆಯುವ ಸತ್ಯವಾದ ಸಂಗತಿ ಆದರೆ ಬೇರೆ ದಾರಿ ಇಲ್ಲದೆ ಅಡ್ಡ ದಾರಿ ಹಿಡಿದು MLA ಗಳಿಗೆ ಸುರಿದ ಹಣವನ್ನು ವಸೂಲಿಮಾಡ್ತಾರೆ.
ಈ ಮಧ್ಯೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂದೆ ನಡೆಯುತ್ತಿದ್ದು DYSP ಗೆ 50 ಲಕ್ಷ ,ಸಿಪಿಐಗೆ 40 ಲಕ್ಷ ,PSI ಗೆ 20 ಲಕ್ಷ ಫಿಕ್ಸ್ ರೇಟ್ ಗೆ ಡೀಲ್ ಮೊದಲೇ ಆಗಿದ್ದು ಆಯಾಯ ಸಂಬಂಧಪಟ್ಟ ಸಚಿವರಿಗೆ ಹಣ ಸಂದಾಯವಾಗುತ್ತದೆಂದು ಮಾಹಿತಿ ದೊರೆತಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬ 20 ಲಕ್ಷ ನೀಡಿ ಇಲ್ಲಿಗೆ ಬಂದಿದ್ದಾರೆ ಹಾಗೂ ಗುರುಮಠಕಲ್ ಠಾಣೆಯಲ್ಲಿ ತೆರವಾದ ಇನ್ಸ್ಪೆಕ್ಟರ್ ಹುದ್ದೆಗೆ 40 ಲಕ್ಷ ಬೇಡಿಕೆ ಇದೆ ಎಂದು ಆರೋಪಿಸಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಗೃಹ ಸಚಿವ ಪರಮೇಶ್ವರ್ ಗೆ ಪತ್ರಬರೆದಿದ್ದು ವ್ಯಾಪಕ ಸಂಚಲನ ಸೃಷ್ಟಿಸಿದೆ.
ನಗರ ಠಾಣೆಯ ಪಿಎಸ್ಐ ಪರಶುರಾಮ್ ಅವರ ಸಾವಿನ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಆಗ್ರಹಿಸಿ ಕಂದಕೂರ ಬರೆದ ಪತ್ರದಲ್ಲಿ ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ದಂದೆ ಕುರಿತು ಪ್ರಸ್ತಾಪಿಸಿದ್ದು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ್ದಾರೆ .
ಮೃತ ಪಿಎಸ್ಐ ಪರಶುರಾಮ ಯಾದಗಿರಿಯಲ್ಲಿ ಮುಂದುವರಿಯಲು 20 ಲಕ್ಷ ಬೇಡಿಕೆ ಇಟ್ಟಿರುವುದು ಖಂಡನೀಯ ಅವೈಜ್ಞಾನಿಕ ವರ್ಗಾವಣೆಯಿಂದಾಗಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಯಾದಗಿರಿಯಲ್ಲಿ ಸೇವೆ ಮುಂದುವರಿಸುದಾಗಿ ಸಚಿವ ಪ್ರಿಯಾಂಕಾ ಖರ್ಗೆಯನ್ನು ಭೇಟಿಮಾಡಿದರು ಏನು ಪ್ರಯೋಜನವಾಗಲಿಲ್ಲ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು .ಅವರ ಕುಟುಂಬ ನಿರ್ವಹಣೆಗೆ ನನ್ನ 2 ತಿಂಗಳ ಭತ್ಯೆ ನೀಡುತ್ತೇನೆಂದು ಶಾಸಕ ಶರಣಗೌಡ ಕುಂದಕೂರ ತಿಳಿಸಿದ್ದಾರೆ.
ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ ಸರ್ಕಾರದಲ್ಲೇ ದಲಿತರ ಹತ್ಯೆಗಳು ಹೆಚ್ಚಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಧಿಕಾರಿ ಆತ್ಮಹತ್ಯೆಗೆ ಶರಣಾದ. ಈಗ ಪಿಎಸ್ಐ ಪರಶುರಾಮ ಮೃತಪಟ್ಟಿದ್ದಾನೆ. ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕರ ಭ್ರಷ್ಟಾಚಾರವೇ ಕಾರಣ. ಪೊಲೀಸ್ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡಿದರೆ ಸಾಲದು. ಸಿಎಂ ರಾಜೀನಾಮೆ ಕೊಟ್ಟರೆ ಡಿಕೆ ಶಿವಕುಮಾರ್ ಸಿಎಂ ಆಗಲು ಅನುಕೂಲವಾಗುತ್ತೆ. ಹಾಗಾಗಿ ವಿಧಾನಸಭೆಯನ್ನು ವಿಸರ್ಜನೆ ಮಾಡಬೇಕು. ಮತ್ತೆ ಚುನಾವಣೆಗೆ ಹೋಗೋಣ ಎಂದು ಹೇಳಿದ್ದಾರೆ.
ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಕೇಸ್ ದಾಖಲಾಗಿದೆ. ಕಿರುಕುಳ, ಪ್ರಚೋದನೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಪರಶುರಾಮ ಪತ್ನಿ ಶ್ವೇತ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ.ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಹಾಗೂ ಪುತ್ರ ಇಬ್ಬರೂ ಫೋನ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಂಧನದ ಭೀತಿ ಹಿನ್ನೆಲೆ ತಂದೆ ಮಗ ಎಸ್ಕೇಪ್ ಆದ್ರಾ ಎನ್ನಲಾಗುತ್ತಿದೆ. ಮನೆ ಮತ್ತು ಕಚೇರಿ ಬಳಿಯೂ ಸಿಗದೆ ನಾಪತ್ತೆಯಾಗಿದ್ದಾರೆ. ಶಾಸಕರ ಕಚೇರಿ ಬಳಿ ಒಬ್ಬನೇ ಒಬ್ಬ ವ್ಯಕ್ತಿಯೂ ಸುಳಿಯುತ್ತಿಲ್ಲ ಯಾವುದೇ ವಾಹನಗಳು ನಿಂತಿಲ್ಲ. ಕಚೇರಿಯ ಮುಖ್ಯ ಗೇಟ್ ಲಾಕ್ ಮಾಡಲಾಗಿದೆ.
ಶಾಸಕ ಚೆನ್ನಾರೆಡ್ಡಿ ಪಾಟೀಲ್, ತಮ್ಮ ಕ್ಷೇತ್ರದ ವ್ಯಾಪ್ತಿಯ ಠಾಣೆಗಳನ್ನು ಒಂದು ರೀತಿ ಹರಾಜಿಗೆ ಇಟ್ಟಿದ್ದರು. ಯಾರು ಹೆಚ್ಚು ಹಣ ನೀಡುತ್ತಾರೊ ಅವರಿಗೆ ವರ್ಗಾವಣೆ ಶಿಫಾರಸು ಪತ್ರ ನೀಡ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. 4-5 ಪಿಎಸ್ಐಗಳ ನಡುವೆ ಪೈಪೋಟಿ ಸೃಷ್ಟಿಸಿ ಹೆಚ್ಚು ನೀಡಿದವರಿಗೆ ಪೋಸ್ಟಿಂಗ್ ಮಾಡಲಾಗುತ್ತಿತ್ತು. ಹಣ ಇಲ್ಲದ ಪಿಎಸ್ಐಗಳಿಗೆ ಪೋಸ್ಟಿಂಗ್ ಸಿಗುತ್ತಿರಲಿಲ್ಲ? 1 ವರ್ಷದ ಪೋಸ್ಟಿಂಗ್ ಪಡೆಯಲು 20-30 ಲಕ್ಷ ಬೇಡಿಕೆ ಇಡುತ್ತಿದ್ದರು. ಹಣ ನೀಡಿದರೂ ಜಾತಿಯ ಲೆಕ್ಕಾಚಾರ ಹಾಕುತ್ತಿದ್ದರು. ಯಾದಗಿರಿ ವ್ಯಾಪ್ತಿಯ 2-3 ಠಾಣೆಗಳಲ್ಲಿ ಶಾಸಕನಿಗೆ 20-30 ಲಕ್ಷ ನೀಡಿ ಪೋಸ್ಟಿಂಗ್ ಪಡೆದಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
Police Constable ge eshtu kodabeku heli Navu kottu transfer hogutteve