ಯಾದಗಿರಿ : ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ಥರ್ಮಾಕೋಲ್ ಸಹಾಯ ಪಡೆದು ವ್ಯಕ್ತಿಯನ್ನು ಮೀನುಗಾರರು ರಕ್ಷಿಸಿದ ಘಟನೆ ನಡೆದಿದೆ. ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಸ್ವತಃ ಮುಂದೆ ನಿಂತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಕಂಡುಬಂದಿದೆ.
ಕೃಷ್ಣ ನದಿತೀರದ ಬಳಿಯ ದ್ರಾಕ್ಷಿ ತೋಟಕ್ಕೆ ತೆರಳಿದ್ದ ಯಮನಪ್ಪ ಕಾಲು ಜಾರಿ ಕೃಷ್ಣ ನದಿಯಲ್ಲಿ ಬಿದ್ದಿದ್ದಾನೆ ಆಗ ನದಿಯಲ್ಲಿದ್ದ ಗೀಡವನ್ನು ಹಿಡಿದುಕೊಂಡು ನಿಂತಿದ್ದಾನೆ.ಕೂಡಲೇ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ಸ್ಥಳೀಯರು ತಹಶಿಲ್ದಾರ್ ಮಾಹಿತಿ ನೀಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಿಸುತ್ತಿದ್ದ ಶಾಸಕ ರಾಜಾ ವೇಣುಗೋಪಾಲ ಗಮನಕ್ಕೆ ತಹಶಿಲ್ದಾರ್ ತಂದಿದ್ದು ತಕ್ಷಣವೇ ಘಟನಾ ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ದೌಡಾಯಿಸಿದ್ದಾರೆ.ನಂತರ ಅಗ್ನಿಶಾಮಕದಳ, ಪೋಲಿಸರಿಗೆ ಕರೆ ಮಾಡಿ ರಕ್ಷಿಸುವಂತೆ ತಿಳಿಸಿದ್ದು ಅದೇ ಗ್ರಾಮದ ಮೀನುಗಾರರಿಗೆ ವೇಣುಗೋಪಾಲ ನಾಯಕ ರಕ್ಷಿಸುವಂತೆ ತಿಳಿಸಿದ್ದಾರೆ.
ನದಿಗಿಳಿದು ತೆಪ್ಪದ ಸಹಾಯದಿಂದ ಯಮನಪ್ಪನನ್ನು ಮೀನುಗಾರರು ರಕ್ಷಿಸಿದ್ದು ಯಮನಪ್ಪ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾನೆ.ಮೀನುಗಾರರ ಕಾರ್ಯಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಸ್ಥಳೀಯರ ಮೆಚ್ಚುಗೆ ವ್ಯಕ್ತಪಡಿಸಿದ್ದು ಬದುಕುಳಿದ ಬಂದ ಕೂಡಲೇ ಯಮನಪ್ಪ ಶಾಸಕ ರಾಜಾ ವೇಣುಗೋಪಾಲ ಕೈ ಮುಗಿದ ನಮಸ್ಕರಿಸಿದ್ದಾನೆ.