ಹಾಸನ : ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ ಎಲ್ಲಾ ನದಿಗಳು ಕಾಲುವೆಗಳು ಕೆರೆಕಟ್ಟೆಗಳು ತುಂಬಿ ತುಳುಕಿವೆ ಅಲ್ಲಲ್ಲಿ ಗುಡ್ಡ ಬೆಟ್ಟಗಳು ಕುಸಿದ ಪರಿಣಾಮ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ನಡುವಿನ ಪ್ರಯಾಣ ಕಡಿತಗೊಳ್ಳುತ್ತಿದೆ. ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಮತ್ತೆ ಜೋರಾಗಿದೆ ನಿರಂತರ ಮಳೆಗೆ ಜಿಲ್ಲೆಯ ಜೀವನದಿ ಹೇಮಾವತಿ ಸೇರಿ ನದಿ ತೊರೆಗಳೆಲ್ಲಾ ಉಕ್ಕಿ ಹರಿಯುತ್ತಿವೆ. ಈ ಮಧ್ಯೆ ಸಕಲೇಶಪುರ ತಾಲೂಕಿನ ಕಡಗರವಳ್ಳಿ-ಯಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತವಾಗಿ ಬೆಂಗಳೂರು, ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದಾಗಿದೆ.
ಬೆಂಗಳೂರು-ಮಂಗಳೂರು ಮಾರ್ಗದ ನಂಬರ್ 63ರಲ್ಲಿ ಹಳಿಯ ಮೇಲೆ ಮಣ್ಣು ಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಮಾರ್ಗದ 8 ರೈಲುಗಳ ಸಂಚಾರ ರದ್ದಾಗಿದ್ದು ಸದ್ಯ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಗಳು ದೌಡಾಸಿದ್ದು, ರೈಲ್ವೆ ಇಲಾಖೆ ಅಧಿಕಾರಿಗಳಿಂದ ರೈಲು ಮಾರ್ಗ ಬದಲಿಸಲಾಗಿದೆ.