ಬೆಂಗಳೂರು : ರಾಜ್ಯ ಸರಕಾರ ಯಾವಾಗಲೂ ಜನಸಾಮನ್ಯರಿಗೆ ಎಲ್ಲ ವಿಚಾರದಲ್ಲೂ ಶಾಕಿಂಗ್ ನ್ಯೂಸ್ ಕೊಡ್ತಾನೆ ಬಂದಿದೆ. ರಾಜ್ಯದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆಯಿಂದ ಕೈ ಸುಟ್ಟುಕೊಂಡಿದ್ದ ಸವಾರರು ಇದೀಗ ಎಮಿಷನ್ ಟೆಸ್ಟಿಂಗ್ ದರ ಏರಿಕೆಯಿಂದ ತಲೆಕೆಡಿಸಿಕೊಳ್ಳುವಂತಾಗಿದೆ.
ಕಾರು, ಬೈಕ್, ಲಾರಿ ಹಾಗೂ ಬಸ್ಸು ಹೀಗೆ ಎಲ್ಲ ವಾಹನಗಳಿಗೂ ಪ್ರತಿ ಆರು ತಿಂಗಳಿಗೆ ಎಮಿಷನ್ ಟೆಸ್ಟ್ ಮಾಡಿಸಬೇಕು. ಇಲ್ಲದಿದ್ದರೆ ಸುಮಾರು 500 ರಿಂದ 1000 ತನಕ ಫೈನ್ ಕಟ್ಟಲು ಪೊಲೀಸರು ಹೇಳ್ತಾರೆ. ಸದ್ಯದಲ್ಲೇ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಾಗಲಿದೆ.ಆದರೆ ಸರಕಾರ ಇದೀಗ ವಾಹನಗಳ
ಎಮಿಷನ್ ಟೆಸ್ಟ್ ದರ ಏರಿಕೆಗೆ ಚಿಂತನೆ ನಡೆದಿದೆ.
ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ದರ ಏರಿಕೆ ಮಾಡುವಂತೆ ಸಾರಿಗೆ ಸಚಿವರಿಗೆ ಮನವಿ ಕೊಟ್ಟಿದೆ. ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ವಾಹನಗಳಿದ್ದು ರಾಜಧಾನಿ ಬೆಂಗಳೂರಲ್ಲೇ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ. ಈ ಹಿಂದೆ ಒಂದು ವಾಹನಕ್ಕೆ ಎಮಿಷನ್ ಟೆಸ್ಟ್ ಮಾಡಿದರೆ, ಎಮಿಷನ್ ಟೆಸ್ಟಿಂಗ್ ಸೆಂಟರ್‌ಗಳಿಂದ ಸರ್ಕಾರಕ್ಕೆ 3.25 ಪೈಸೆ ರೂ. ನೀಡಬೇಕಿತ್ತು ಆದರೆ ಇನ್ನು ಮುಂದೆ ಸರ್ಕಾರಕ್ಕೆ 13.80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.
ರಾಜ್ಯದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಲ್ಲಾ ರೀತಿಯ ತೆರಿಗೆ ಸಂಗ್ರಹದಲ್ಲೂ ಸರಕಾರ ಮೇಲುಗೈ ಸಾಧಿಸಿದೆ. ಸದ್ಯ ಒಂದು ಬೈಕ್ ಎಮಿಷನ್ ಮಾಡಲು – 65 ರೂ. ತೆಗೆದುಕೊಳ್ಳಲಾಗುತ್ತಿದೆ. ಮುಂದೆ 110ರೂ.ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ತ್ರಿಚಕ್ರ- ( ಆಟೋ, ಗೂಡ್ಸ್ ಆಟೋ ) ಸದ್ಯ 75 ರೂ ರಿಂದ 100 ರೂ, ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳು- ಸದ್ಯ- 115 ರುಪಾಯಿ 200 ರುಪಾಯಿ ಏರಿಕೆ ಆಗಲಿದೆ. ಎಲ್ಲಾ ಮಾದರಿಯ ಡಿಸೇಲ್ ವಾಹನಗಳು ( ಲಾರಿ, ಬಸ್ ಹಾಗೂ ಟ್ರಕ್ ) ಸದ್ಯ – 160 ರುಪಾಯಿ 250 ಏರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.ಒಟ್ಟಿನಲ್ಲಿ ಜನಸಾಮನ್ಯರು ಕುಂತರೂ ನಿಂತರೂ ತೆರಿಗೆಕಟ್ಟುವಂತಾಗಿದೆ.