Friday, March 13, 2026
Flats for sale
Homeಗ್ಯಾಜೆಟ್ / ಟೆಕ್ಬೆಂಗಳೂರು : 14 ಗಂಟೆಗಳ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾಪ : ಸರ್ಕಾರದ ವಿರುದ್ಧ ಐಟಿ...

ಬೆಂಗಳೂರು : 14 ಗಂಟೆಗಳ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾಪ : ಸರ್ಕಾರದ ವಿರುದ್ಧ ಐಟಿ ವೃತ್ತಿಪರರ Email ಸಮರ.

ಬೆಂಗಳೂರು : ಈ ಸರಕಾರದ ಸಚಿವರೇ ಈಗೆ ಅವರಿಗೆ ಬೇಕಾದ ರೀತಿ ಸಮಯ ನಿಗದಿಪಡಿಸುತ್ತಾರೆ “ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ” ಎಂಬ ಗಾದೆ ಮಾತಿನ ತರಹ ಆಯಿತು ಈ ಕಾರ್ಮಿಕ ಸಚಿವನ ಕಥೆ.ಐಟಿ ಕಂಪನಿಗಳಲ್ಲಿ 14 ಗಂಟೆ ಕೆಲಸದ ಅವಧಿ ನಿಗದಿಪಡಿಸುವ ವಿಚಾರವಾಗಿ ಸಿಡಿದೆದ್ದಿರುವ ಐಟಿ ವೃತ್ತಿಪರರು ಇದೀಗ ಮೇಲ್ ಅಭಿಯಾನ ಶುರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ‘I oppose the Increase in Working Hours’ ಎಂಬ ಮೇಲ್ ಮಾಡಲು ಆರಂಭಿಸಿದ್ದಾರೆ.

1961ಕ್ಕೆ ತಿದ್ದುಪಡಿ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಜತೆಗೆ, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು. ಐಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.

ಇನ್ನು ಕೆಲವರು ಜನಸಾಮನ್ಯರ ನಾಡಿಮಿಡಿತ ಗೊತ್ತಿಲ್ಲದವರು ಸಚಿವರಾದರೆ ಇದೆ ಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೇವಲ ವಿಧಾನ ಸಭೆಯಲ್ಲಿ ಬೊಬ್ಬೆಹಾಕಿದಂತಲ್ಲ ಈ ಕೆಲಸ ಎಂದು ಅನೇಕರು ಸಾಮಾಜಿಕಜಾಲತಾಣದಲ್ಲಿ ಬರೆದಿದ್ದಾರೆ. ಈ ಪ್ರಸ್ತಾವನೆ ಜಾರಿಯಾದರೆ ಕುಟುಂಬ ಪುಟ್ಟ ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ ,ಆರೋಗ್ಯದ ಸಮಸ್ಯೆ ಉಟಾಗುತ್ತದೆ ಎಂದು ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಲು ಐಟಿ ವೃತ್ತಿಪರರು ನಿರ್ಧಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಮೇಲ್ ಸಂದೇಶದಲ್ಲಿ ಉಲ್ಲೇಖಿಸಲು ಕರ್ನಾಟಕ ರಾಜ್ಯ ಐಟಿ ಮತ್ತು ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ ಉದ್ಯೋಗಿಗಳಲ್ಲಿ ಮನವಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular