ಮುಂಬೈ : ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ಸರ್ವರ್‌ಡೌನ್ ಆಗಿದ್ದು ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ಇವತ್ತು ಒಂದೇ ದಿನದಲ್ಲಿ ವಿಶ್ವಾದ್ಯಂತ ಬಹಳಷ್ಟು ಕಂಪ್ಯೂಟರ್ಗಳ ಮೇಲೆ ಇದು ಪರಿಣಾಮ ಬೀರಿದೆ. ಬ್ಯಾಂಕುಗಳು, ನ್ಯೂಸ್ ಚಾನಲ್ಗಳು, ಷೇರು ವಿನಿಮಯ ಕೇಂದ್ರ ಹೀಗೆ ಬಹಳಷ್ಟು ಸೇವೆಗಳು ಸ್ಥಗಿತಗೊಂಡ ಬಗ್ಗೆ ವರದಿಯಾಗಿದೆ.
ವಿಂಡೋಸ್ 10, ಮೈಕ್ರೋಸಾಫ್ಟ್ ಅಭಿವೃದ್ಧಿ ಪಡಿಸಿರುವ ಹೊಸ ಸಾಫ್ಟ್ವೇರ್ ಈಗ ಜಾಗತಿಕವಾಗಿ ದೊಡ್ಡ ಸಮಸ್ಯೆಯಾಗಿ ಕಾಡಲು ಆರಂಭಿಸಿದೆ. ವಿಂಡೋಸ್ 10 ಬಳಕೆದಾರರು ಅದು ನೀಡುತ್ತಿರುವ ಹೊಸ ಸಮಸ್ಯೆಗೆ ಹೈರಾಣಾಗಿ ಹೋಗಿದ್ದಾರೆ. ವಿಶ್ವದ ಹಲವು ಕಡೆ ಬಿಎಸ್ಒಡಿ ಅಂದ್ರೆ ಬ್ಲೂ ಸ್ಕ್ರೀನ್ ಆಪ್ ಡೆತ್ ಅನ್ನೋ ಸಮಸ್ಯೆಯೊಂದು ಸೃಷ್ಟಿಯಾಗಿದೆ.
ಮೆಕ್ರೋಸಾಫ್ಟ್‌ನ 365ಕ್ಕೂ ಹೆಚ್ಚು ಆಪ್‌ಗಳಿದ್ದು, ಇದೆಲ್ಲವುಗಳು ಸಮಸ್ಯೆ ತೋರಿಸುತ್ತಿದ್ದು, ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಇತ್ತೀಚಿನ ಜಾಗತಿಕ ಸೈಬರ್ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್‌ನಲ್ಲಿ ಮಾಡಿದ ಹೊಸ ಅಪ್‌ಡೇಟ್‌ನ ನಂತರ ಈ ಸಮಸ್ಯೆ ಎದುರಾಗಿದೆ. ಇಂದು ಮುಂಜಾನೆಯಿಂದ ಈ ಸಮಸ್ಯೆ ಆರಂಭವಾಗಿದ್ದು, ಇದು ಜಾಗತಿಕ ಮಟ್ಟದ ಹಲವು ಕಂಪನಿಗಳ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ, ಅಮೆರಿಕಾ, ಆಸ್ಟ್ರೇಲಿಯಾದ ಎಲ್ಲಾ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ವಿಮಾನಯಾನ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ತೊಂದರೆ ಆಗಿದ್ದು, ಅನೇಕರು ಈ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ನಿಮಗೂ ಇವತ್ತು ಈ ವಿಂಡೋಸ್ ಬ್ಲೂಸ್ ಸ್ಕ್ರೀನ್ ಎರರ್ ಕಾಣಿಸಿಕೊಂಡಿಯಾ ಇದಕ್ಕೆ ಪರಿಹಾರ ಇದೆ ನೋಡಿ
ನಿಮ್ಮ ವಿಂಡೋಸ್ ಅನ್ನು ಸ್ಟಾರ್ಟ್ ಮಾಡಿ ಸೇಫ್ ಮೋಡ್ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್ನಲ್ಲಿ ಬೂಟ್ ಮಾಡಿ.
C:\Windows\System32\drivers\CrowdStrike directory ಇಲ್ಲಿಗೆ ಹೋಗಿ
ಇಲ್ಲಿ ‘C-00000291*.sys’ ಎಂಬ ಹೆಸರಿನ ಫೈಲ್ ಅನ್ನು ಹುಡುಕಿರಿ.
ಈ ಫೈಲ್ ಅನ್ನು ಡಿಲೀಟ್ ಮಾಡಿ.
ಈಗ ನಿಮ್ಮ ವಿಂಡೋಸ್ ಅನ್ನು ಮಾಮೂಲಿಯ ರೀತಿಯಲ್ಲಿ ಬೂಟ್ ಮಾಡಿ.
ಈ ಮೇಲಿನ ಕ್ರಮದ ಬಳಿಕ ನಿಮ್ಮ ಸಿಸ್ಟಂ ಸರಿಯಾಗಬಹುದು. ಒಂದು ವೇಳೆ ಸರಿಯಾಗಲಿಲ್ಲವೆಂದರೆ ಐಟಿ ಸಹಾಯ ಪಡೆಯಬೇಕಾಗಬಹುದು. ಕ್ರೌಡ್ಸ್ಟ್ರೈಕ್ ಕಂಪನಿ ಕೂಡ ಈ ಅಪ್ಡೇಟ್ ಅನ್ನು ಸರಿಪಡಿಸಿ ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿದೆ.