Sunday, March 15, 2026
Flats for sale
Homeಜಿಲ್ಲೆಮಂಗಳೂರು : ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಲೇಜು ವಿಧ್ಯಾರ್ಥಿನಿ ಸಾವು.

ಮಂಗಳೂರು : ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಲೇಜು ವಿಧ್ಯಾರ್ಥಿನಿ ಸಾವು.

ಮಂಗಳೂರು : ಕಳೆದ ಹಲವು ದಿನಗಳಿಂದ ಸುರಿಯುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಅನೇಕ ಸಾವುನೋವುಗಳು ಸಂಭವಿಸಿದೆ.

ಇಂದು ಮುಂಜಾನೆಯ ವೇಳೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದ ಕಾಲೇಜಿ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತ ದುರ್ದೈವಿ ವಿದ್ಯಾರ್ಥಿನಿ ಅಶ್ವಿನಿ ಶೆಟ್ಟಿ(೨೧) ಎಂದು ತಿಳಿದುಬಂದಿದೆ. ಈಕೆ ಗುರುಪುರ ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿಯಾಗಿದ್ದು,ಮಂಗಳೂರಿನ ಕಾಲೇಜಲ್ಲಿ ಚಾರ್ಟೆಡ್ ಅಕೌಂಟೆಂ ಟ್ ವಿಧ್ಯಾಭ್ಯಾಸ ಮಾಡುತ್ತಿದ್ದಳು.

ಎಡೆಬಿಡದೆ ಸುರಿಯುವ ಮಳೆಯಿಂದಾಗಿ ಜಿಲ್ಲೆಯಲ್ಲಿ ರೆಡ್ ಎಲರ್ಟ್ ಸೂಚಿಸಿದ್ದು ಎಂದಿನಂತೆ ಹರೀಶ್ ಶೆಟ್ಟಿ ಅವರು ತಮ್ಮ ಮನೆಯ ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಲು ಹೋಗಿದ್ದು, ಅವರ ಹಿಂದೆ ಮನೆಯ ಎರಡು ನಾಯಿಗಳು ಹೋಗಿದ್ದವು. ತಮ್ಮ ಮನೆಯ ನಾಯಿಗಳನ್ನು ತರಲೆಂದು ಆಶ್ನಿ ಪ್ರಯತ್ನಿಸಿದಾಗ ಅದಾಗಲೇ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದ್ದು, ತೀವ್ರ ಅಸ್ವಸ್ಥ ಗೊಂಡ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ವಿದ್ಯುತ್ ತಂತಿ ಬಿದ್ದಿದ್ದ ಸ್ಥಳದಲ್ಲಿ ಮೂರು ನಾಯಿಗಳು ಹಾಗೂ ಒಂದು ಕೇರೆ ಹಾವು ಸತ್ತು ಬಿದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular