ಬೆಂಗಳೂರು : ಈ ರಾಜಕೀಯ ಅಂದರೇನೇ ಈಗೆ ಯಾವಾಗ ಜೊತೆಯಲ್ಲಿ ಇರ್ತಾರೆ ಯಾವಾಗ ರೆಬೆಲ್ ಆಗ್ತಾರೆ ಎಂಬುದು ಗೊತ್ತಾಗಲ್ಲ. ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ,ಮೂಡ ಹಗರಣ ಇದೀಗ ಸಿದ್ದರಾಮಯ್ಯ ಸರಕಾರಕ್ಕೆ ಮುಜುಗರಕ್ಕೆ ಒಳಗಾಗಿದ್ದು ಇನ್ನಿತರ ಕಾಂಗ್ರೆಸ್ ಶಾಸಕರು ಕೂಡ ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡಿದ್ದಾರೆಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ನಡೆಯುತ್ತಾ ಎಂಬ ಮಾತು ಕೇಳಿಬರುತ್ತಿದೆ.ರಾಜ್ಯ ರಾಜಕಾರಣದಲ್ಲಿ 2019ರ ಬೆಳವಣಿಗೆ ಮತ್ತೆ ಮರುಕಳಿಸುತ್ತಾ ಸಿಎಂ ಸಿದ್ದರಾಮಯ್ಯ ಪಟ್ಟಕ್ಕೆ ಕುತ್ತು ಬಂದಿದ್ದೇ ಆದ್ರೆ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುವ ಸುಳಿವು ಸಿಕ್ಕಿದೆ.
ಈ ರೀತಿ ಬೆಳವಣಿಗೆಗಳೇನು ಹೊಸತಲ್ಲ. ಆದ್ರೆ, ಈಗ ಎದ್ದಿರೋ ಚರ್ಚೆ ಇದಕ್ಕೂ ಒಂದು ಕೈ ಮೇಲೆ. ಅದುವೆೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಸತೀಶ್ ಜಾರಕಿಹೊಳಿ ನಡುವಿನ ರಹಸ್ಯ ಭೇಟಿ. ರಾಜ್ಯದಲ್ಲಿ ಸಿಎಂ ಬದಲಾವಣೆ ಹೆಚ್ಚುವರಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಕೇಳಿ ಬಂದಿದೆ. ಒಂದು ವೇಳೆ ಸಿಎಂ ಬದಲಾದ್ರೆ ರಾಜ್ಯದಲ್ಲಿ ಸತೀಶ್ ಜಾರಕಿಹೊಳಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ಆಗ್ತಾರಾ ಎಂಬ ಚರ್ಚೆ ಶುರುವಾಗಿದೆ.ಏಕನಾಥ್ ಶಿಂಧೆ ಬಂಡಾಯ ಎದ್ದು ಸಿಎಂ ಆಗಿದ್ದು ಎಲ್ಲರಿಗೂ ಗೊತ್ತಿದೆ. ಸೇಮ್ ಸೇಮ್ ಬಟ್ ಡಿಫ್ರೆಂಟ್ ಅನ್ನೋ ಥರ ಕರುನಾಡಲ್ಲಿ ಏನಾದ್ರು ಬೆಳವಣಿಗೆ ಆಗುತ್ತಿದ್ಯಾ ಎಂಬ ಸಂಶಯ ಮೂಡಿದೆ. ಸಿಎಂ, ಡಿಸಿಎಂ ಕದನದ ಮಧ್ಯೆ ದಳಪತಿ-ಬೆಳಗಾವಿ ಸಾಹುಕಾರ್ ಭೇಟಿ ಭಾರೀ ಕೌತುಕಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಸತೀಶ್ ಜಾರಕಿಹೊಳಿ ಸಹ ಹೆಚ್ಚುವರಿ ಡಿಸಿಎಂಗೆ ಬೇಡಿಕೆ ಇಟ್ಟಿದ್ದಾರೆ ಅದು ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಗಾದೆ ಮೇಲೆ ಕಣ್ಣಿಟ್ಟಿದ್ದಾರೆ. ಡಿ.ಕೆ.ಶಿ ಹಾಗೂ ಸಿದ್ದರಾಮಯ್ಯ ನಡುವಿನ ಬಣಗಳ ಗುದ್ದಾಟದಲ್ಲಿ ಸಿಎಂ ಬದಲಾದ್ರೆ ಸತೀಶ್ ಜಾರಕಿಹೊಳಿ ರೆಬಲ್ ಆಗ್ತಾರಾ ಎಂಬ ಚರ್ಚೆ ಮೂಡಿಬರುತ್ತಿದೆ.ಒಟ್ಟಿನಲ್ಲಿ ಅಧಿಕಾರಕ್ಕೋಸ್ಕರ ಸಿಎಂ ಕುರ್ಚಿಯ ನಡುವಿನ ಫೈಟ್ ಸರಕಾರಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಗೆ ನುಂಗಲಾರದ ತುತ್ತಿನಂತಾಗಿದೆ.


