Friday, July 24, 2026
Homeಕ್ರೈಂಮಂಡ್ಯ : SHOCKING NEWS : ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ,ಕಾಮುಕ...

ಮಂಡ್ಯ : SHOCKING NEWS : ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ,ಕಾಮುಕ ಆರೆಸ್ಟ್.

ಮಂಡ್ಯ ; ಒಂದೇ ಶಾಲೆಯ ಹತ್ತಾರು ವಿಧ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕೃತ್ಯ ವೆಸಗಿದ ಆರೋಪಿಯನ್ನು ಯೋಗಿ ಎಂದು ಗುರುತಿದಲಾಗಿದೆ. ಈತ ಕ್ರೀಡೆಯಲ್ಲಿ ಆಸಕ್ತಿ ಇದ್ದ ಬಾಲಕೀಯರನ್ನು ಟಾರ್ಗೆಟ್ ಮಾಡುತ್ತಿದ್ದನಂತೆ. ಡ್ರಾಪ್ ಕೊಡೊ ನೆಪದಲ್ಲಿ, ಕ್ರೀಡೆ ಹೇಳಿಕೊಡೊ ನೆಪದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯೊಂದರ ಹಲವು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ನೊಂದ ನಾಲ್ವರು ಬಾಲಕಿಯರು ನೀಡಿರೊ‌ ದೂರಿನನ್ವಯ ಯೋಗಿ ಎಂಬಾತನ ವಿರುದ್ದ ಎಫ್ ಐ ಆರ್ ದಾಖಲಿಸಿ, ಪೊಲೀಸರು ಜೈಲಿಗೆ ಕಳಿಸಿದ್ದಾರೆ.

ಇನ್ನೂ ವಿದ್ಯಾರ್ಥಿನೀಯರು ಬಟ್ಟೆ ಬದಲಿಸುವಾಗ ನಗ್ನ ಪೋಟೊ ತೆಗೆದು ಅವುಗಳನ್ನ ಹೆತ್ತವರಿಗೆ ಕಳುಹಿಸೊದಾಗಿ ಬೆದರಿಸಿ ದೌರ್ಜನ್ಯ ನಡೆಸಿದ್ದಾನಂತೆ. ಕಿರಾತನಕ ದೌರ್ಜನ್ಯದಿಂದ ಬೇಸತ್ತ ಮಕ್ಕಳಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಒಂದೇ ಶಾಲೆಯ ಹಲವು ವಿದ್ಯಾರ್ಥಿನೀಯರಿಗೆ ಬ್ಲಾಕ್ ‌ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿರೊ ಆಸಾಮಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿಗಳು ನೀಡಿರೊ ದೂರಿನನ್ವಯ ಆತನ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ಪೋಸ್ಕೊ ಜೊತೆಗೆ ಐಪಿಸಿ ಸೆಕ್ಸನ್ 354 A, 354 D, 509 ರಿತ್ಯ ಕೇಸ್ ದಾಖಲಿಸಿ ಜೈಲಿಗೆ ಪೊಲೀಸರು ಕಳುಹಿಸಿದ್ದಾರೆ. ಈ ಸಂಬಂಧ ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular