ಮಂಗಳೂರು : ಮೊನ್ನೆ ತಾನೇ ಚಡ್ಡಿ ಗ್ಯಾಂಗ್ ಎಂಟ್ರಿ ಕೊಟ್ಟರು ಪೊಲೀಸ್ ಇಲಾಖೆ ಸುಮ್ಮನಿದ್ದಂತಿದೆ. ಆದರೆ ಇತ್ತೀಚಿಗೆ ನಗರದಲ್ಲಿ ದರೋಡೆ ಕೋರರ ,ಕಳ್ಳರ ಕಾಟ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ಹಲವು ಪ್ರಕರಣಗಳು ಹೆಚ್ಚುತ್ತಲೇ ಇದೆ .ಮನೆಯಲ್ಲಿ ಕೇವಲ ವೃದ್ಧರು ಇರುವುದನ್ನು ಕಂಡು ಬೆದರಿಸಿ ,ಚಿನ್ನಾಭರಣ ,ಕಾರು ಲೂಟಿ ಹೊಡೆದ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ಉರ್ವಸ್ಟೋರ್ ಕೋಟೆಕಣಿ ಒಂದನೇ ಕ್ರಾಸ್ ನ ಮನೆಯೊಂದಕ್ಕೆ ಮಂಗಳವಾರ ಮುಂಜಾನೆ ಕಳ್ಳರು ನುಗ್ಗಿದ ಘಟನೆ ವರದಿಯಾಗಿದೆ . ನಗರದಲ್ಲಿ ಕ್ರಮಿನಲ್ ಚಟುವಟಿಕೆ ಹೆಚ್ಚಾಗುತ್ತಿದ್ದು, ಮತ್ತೊಂದು ದರೋಡೆ ಪ್ರಕರಣ ನಡೆದಿದೆ.
ಹಿರಿಯ ನಾಗರಿಕರಿದ್ದ ಮನೆಗೆ ನುಗ್ಗಿ ಬೆದರಿಸಿ ಚಿನ್ನಾಭರಣ ಲೂಟಿ ಮಾಡಲಾಗಿದೆ. ಬಳಿಕ ಮನೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ. ನಸುಕಿನ ಜಾವ 3.30 ಕ್ಕೆ ಉರ್ವ ಕೊಟ್ಟರದ ಮನೆಯಲ್ಲಿ ಈ ದರೋಡೆ ನಡೆದಿದ್ದು, ಕಾರು ಮುಲ್ಕಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಹಿರಿಯ ನಾಗರಿಕರಿದ್ದು ಅವರ ಮಕ್ಕಳು ವಿದೇಶದಲ್ಲಿ ಇದ್ದಾರೆ. ಇದನ್ನು ಅರಿತೇ ಈ ದರೋಡೆ ನಡೆಸಿರುವ ಸಾದ್ಯತೆ ಇದೆ ಎಂದು ತಿಳಿದುಬಂದಿದೆ. ಬಿಟ್ಟು ಹೋದ ಕಾರಿನಲ್ಲಿ ಮೊಬೈಲ್ ಒಂದು ಪತ್ತೆಯಾಗಿದ್ದು ಪೊಲೀಸರು ತನಿಕೆ ನಡೆಸುತ್ತಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಲೂಟಿ ಮಾಡಿ ಕಾರು ಕೀ ಪಡೆದಿದ್ದಾರೆ ಎಂದು ಮನೆಯವರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


