Wednesday, November 5, 2025
Flats for sale
Homeರಾಜ್ಯಅರಸೀಕೆರೆ ; ಆಹಾರ ಅರಸಿ ಮನೆ ಬಳಿ ಬಂದ ಚಿರತೆಯನ್ನು ಗದರಿಸಿ ಓಡಿಸಿದ ಮಹಿಳೆ.

ಅರಸೀಕೆರೆ ; ಆಹಾರ ಅರಸಿ ಮನೆ ಬಳಿ ಬಂದ ಚಿರತೆಯನ್ನು ಗದರಿಸಿ ಓಡಿಸಿದ ಮಹಿಳೆ.

ಅರಸೀಕೆರೆ : ಆಹಾರ ಅರಸಿ ಮನೆಯ ಬಾಗಿಲಿಗೆ ಬಂದ
ಚಿರತೆಯನ್ನು ಮಹಿಳೆಯೊಬ್ಬರು ಗದರಿಸಿ ಓಡಿಸಿರುವ ಘಟನೆ. ಅರಸೀಕೆರೆ ತಾಲೂಕಿನ , ಜಾವಗಲ್ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಜಾವಗಲ್ ಹೊರವಲಯದ ನೇರ್ಲಿಗೆ-ಕಡೂರು ರಸ್ತೆಯಲ್ಲಿರುವ ಇಂದ್ರೇಶ್ ಎಂಬುವವರ ತೋಟದ ಮನೆಯ ಬಳಿ ನಿನ್ನೆ ರಾತ್ರಿ 8.30 ರ ಸುಮಾರಿಗೆ ಚಿರತೆ ಬಂದಿದೆ ಈ ವೇಳೆ ಮನೆಯ ಮಹಿಳೆ ಬೊಬ್ಬೆ ಹೊಡೆದು ಗದರಿಸಿದ್ದಾರೆ ಈ ವೇಳೆ ಚಿರತೆ ಓಡಿ ಹೋಗಿದೆ.

ಚಿರತೆ ಬಂದಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಯಾಗಿದ್ದು ಚಿರತೆ ಕಾಣಿಸಿ ಕೊಂಡಿರುವುದರಿಂದ ಆತಂಕಗೊಂಡಿರುವ ಇಂದ್ರೇಶ್ ಕುಟುಂಬಸ್ಥರು ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular