Friday, November 22, 2024
Flats for sale
Homeದೇಶಚಿತ್ರದುರ್ಗ : ಇಸ್ರೋದಿಂದ ಇಂದು ಮತ್ತೊಂದು ಪ್ರಯೋಗ : ಪುಷ್ಪಕ್ ಗಗನ ನೌಕೆಯ ಅಂತಿಮ ಹಂತದ...

ಚಿತ್ರದುರ್ಗ : ಇಸ್ರೋದಿಂದ ಇಂದು ಮತ್ತೊಂದು ಪ್ರಯೋಗ : ಪುಷ್ಪಕ್ ಗಗನ ನೌಕೆಯ ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ.

ಚಿತ್ರದುರ್ಗ : ಬಾಹ್ಯಾಕಾಶ ರಂಗದಲ್ಲಿ ತನ್ನ ಮಹತ್ವದ ಛಾಪು ಮೂಡಿಸುತ್ತಿರುವ ಭಾರತ ಇಂದು ಮತ್ತೊಂದು ಸಾಧನೆ ಮಾಡಿದೆ. ಮರು ಬಳಕೆ ಬಾಹ್ಯಾಕಾಶ ವಾಹನ ಪುಷ್ಪಕ್ ಗಗನ ನೌಕೆಯನ್ನು ಮೂರನೇ ಮತ್ತು ಅಂತಿಮ ಪ್ರಾಯೋಗಿಕ ಉಡಾವಣೆ ಯಶಸ್ವಿಯಾಗಿದೆ.

ಚಿತ್ರದುರ್ಗ (chitradurga )ಜಿಲ್ಲೆಯ challakere ಚಳ್ಳಕೆರೆ ತಾಲ್ಲೂಕಿನ ನಾಯಕನ ಹಟ್ಟಿಯಲ್ಲಿ ಸಮೀಪ (kudapur) ಕುದಾಪುರ ಡಿಆರ್‌ಡಿಒ ಆವರಣದಲ್ಲಿ ಭಾನುವಾರ ಯಶಸ್ವಿ ಪ್ರಯೋಗ ನಡೆದಿದೆ. ಕುದಾಪುರದ ರನ್‌ ವೇನಿಂದ ‘ಆಗಸಕ್ಕೆ ಚಿಮ್ಮಿದ ದೊಡ್ಡ ಗಾತ್ರದ ರೆಕ್ಕೆ ಇರುವ ರಾಕೆಟ್, ಯಶಸ್ವಿಯಾಗಿ ಉಡಾವಣೆಯಾಗಿ ಬಳಿಕ ಲ್ಯಾಂಡ್ ಆಗಿದೆ.

ಪುಷ್ಪಕ್ ಗಗನ ನೌಕೆಯು ಮರು ಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವಾಗಿದ್ದು, ರಾಕೆಟ್ ರೀತಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಈ ವಾಹನ, ಮರಳಿ ಭೂಮಿಗೆ ಬಂದು ಲ್ಯಾಂಡ್ ಆಗುತ್ತದೆ. ಹೀಗಾಗಿ, ಈ ವಾಹನವನ್ನು ಸ್ವದೇಶಿ ಗಗನ ನೌಕೆ ಎಂದೇ ಬಣ್ಣಿಸಲಾಗಿದೆ. ಮರು ಬಳಕೆ ರಾಕೆಟ್ ವಿಭಾಗದಲ್ಲಿ ಈ ವಾಹನ ಮಹತ್ವದ ಸ್ಥಾನ ಪಡೆದಿದೆ. ಸದ್ಯ ಪುಷ್ಪಕ್ ಗಗನ ನೌಕೆ ಯನ್ನು ಮೂರು ಬಾರಿ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular