Friday, November 22, 2024
Flats for sale
Homeದೇಶನವದೆಹಲಿ : ಸತತ 3ನೇ ಬಾರಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಸ್ವೀಕಾರ,ಮೋದಿ ಸಂಪುಟಕ್ಕೆ...

ನವದೆಹಲಿ : ಸತತ 3ನೇ ಬಾರಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ಸ್ವೀಕಾರ,ಮೋದಿ ಸಂಪುಟಕ್ಕೆ 72 ಸಚಿವರು ಸೇರ್ಪಡೆ.

ನವದೆಹಲಿ : ಸತತ 3ನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮೋದಿ ನಂತರ ಹಿರಿಯ ನಾಯಕರಾದ ರಾಜ್ ನಾಥ್ ಸಿಂಗ್, ಅಮಿತ್ ಶಾ, ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಕೂಡ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯಯರ ಜೊತೆಗೆ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಹಲವಾರು ಹೊಸ ಮುಖಗಳನ್ನು ಮೋದಿ 3.0 ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ.

ಕರ್ನಾಟಕದವರು : ಈ ಬಾರಿ ಮೋದಿ ಸಂಪುಟದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮೋದಿ ಕ್ಯಾಬಿನೆಟ್ 3.0 ರಲ್ಲಿ ಸೇರ್ಪಡೆಗೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸೇರಿ ರಾಜ್ಯದಲ್ಲಿ 19 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಮಾಜಿ ಸಚಿವ ವಿ ಸೋಮಣ್ಣ, ಧಾರವಾಡ ಸಂಸದ ಈ ಹಿಂದೆಯೂ ಸಚಿವರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಹಾರದ ನಿತೀಶ್‌ ಕುಮಾರ್‌ ಅವರು ಜೆಡಿಯುಗೆ ಕೃಷಿ ಖಾತೆ ನೀಡುವಂತೆ ಡಿಮ್ಯಾಂಡ್‌ ಮಾಡಿದ್ದಾರೆ. ಆದರೆ ಕರ್ನಾಟಕದ ಎಚ್‌.ಡಿ ಕುಮಾರಸ್ವಾಮಿ ಅವರೂ ಕೃಷಿ ಖಾತೆ ನೀಡಿದರೆ ನಿರ್ವಹಿಸಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರೂ ಮಹತ್ವದ ಖಾತೆಗಳನ್ನು ಕೇಳಿದ್ದಾರೆ.

ಆದರೆ ಈಗ ಪ್ರಮಾಣ ವಚನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೋಡಿದರೆ, ಕ್ಯಾಬಿನೆಟ್‌ ದರ್ಜೆಯ 11 ಸ್ಥಾನಗಳನ್ನು ಬಿಜೆಪಿ ತನ್ನ ಜೊತೆಗೇ ಇಟ್ಟುಕೊಂಡಿದೆ. ಟಿಡಿಪಿಗೆ 2, ಜೆಡಿಯುಗೆ 2, ಜೆಡಿಎಸ್‌, ಶಿವಸೇನೆ, ಎಲ್‌ಜೆಪಿ, ಆರ್‌ಎಲ್‌ಡಿ ಮುಂತಾದ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನಗಳನ್ನು ನೀಡಿದೆ. ಈಗ ಯಾವ ಖಾತೆ ಯಾರಿಗೆ ಎಂಬ ನಿರ್ಣಯ ಇನ್ನು ಆಗಬೇಕಿದೆ. ಮಿತ್ರಪಕ್ಷಗಳು ಮಹತ್ವದ ಖಾತೆಗಾಗಿ ಪಟ್ಟು ಹಿಡಿಯುತ್ತವೆಯೇ ಅಥವಾ ಕೊಟ್ಟದ್ದಕ್ಕೆ ತೃಪ್ತವಾಗುತ್ತವೆಯೇ ಎಂದು ನೋಡಬೇಕಿದೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು:

ರಾಜನಾಥ ಸಿಂಗ್ (ಬಿಜೆಪಿ)

ಅಮಿತ್ ಶಾ (ಬಿಜೆಪಿ)

ನಿತಿನ್ ಗಡ್ಕರಿ (ಬಿಜೆಪಿ)

ಜೆ.ಪಿ. ನಡ್ಡಾ (ಬಿಜೆಪಿ)

ಶಿವರಾಜ ಸಿಂಗ್ ಚೌಹಾಣ (ಬಿಜೆಪಿ)

ನಿರ್ಮಲಾ ಸೀತಾರಾಮನ್ (ಬಿಜೆಪಿ)

ಎಸ್. ಜೈಶಂಕರ (ಬಿಜೆಪಿ)

ಮನೋಹರ ಲಾಲ ಖಟ್ಟರ್ (ಬಿಜೆಪಿ)

ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್‌)

ಪಿಯೂಷ್ ಗೋಯಲ್ (ಬಿಜೆಪಿ)

ಧರ್ಮೇಂದ್ರ ಪ್ರಧಾನ (ಬಿಜೆಪಿ)

ಜಿತನ್ ರಾಮ್ ಮಾಂಝಿ (ಎಚ್‌ಎಎಂ)

ರಾಜೀವ ರಂಜನ ಸಿಂಗ್ ಅಲಿಯಾಸ್ ಲಲ್ಲನ್‌ ಸಿಂಗ್ (ಜೆಡಿಯು)

ಸರ್ಬಾನಂದ ಸೋನೋವಾಲ್ (ಬಿಜೆಪಿ)

ಡಾ ವೀರೇಂದ್ರ ಕುಮಾರ (ಬಿಜೆಪಿ)

ಕಿಂಜರಾಪು ರಾಮ ಮೋಹನ ನಾಯ್ಡು (ಟಿಡಿಪಿ)

ಪ್ರಹ್ಲಾದ ಜೋಶಿ (ಬಿಜೆಪಿ)

ಜುಯಲ್ ಓರಮ್ (ಬಿಜೆಪಿ)

ಗಿರಿರಾಜ ಸಿಂಗ್ (ಬಿಜೆಪಿ)

ಅಶ್ವಿನಿ ವೈಷ್ಣವ (ಬಿಜೆಪಿ)

ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)

ಭೂಪೇಂದರ ಯಾದವ್ (ಬಿಜೆಪಿ)

ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)

ಅನ್ನಪೂರ್ಣ ದೇವಿ (ಬಿಜೆಪಿ)

ಕಿರಣ ರಿಜಿಜು (ಬಿಜೆಪಿ)

ಹರ್ದೀಪ್ ಸಿಂಗ್ ಪುರಿ (ಬಿಜೆಪಿ)

ಮನ್ಸುಖ್ ಮಾಂಡವಿಯಾ (ಬಿಜೆಪಿ)

ಜಿ ಕಿಶನ್ ರೆಡ್ಡಿ (ಬಿಜೆಪಿ)

ಚಿರಾಗ ಪಾಸ್ವಾನ್ (ಎಲ್‌ಜೆಪಿ)

ಸಿ.ಆರ್. ಪಾಟೀಲ (ಬಿಜೆಪಿ)

ರಾವ್ ಇಂದ್ರಜಿತ್ ಸಿಂಗ್ (ಬಿಜೆಪಿ)

ಜಿತೇಂದ್ರ ಸಿಂಗ್ (ಬಿಜೆಪಿ)

ಅರ್ಜುನ್ ರಾಮ ಮೇಘವಾಲ್ (ಬಿಜೆಪಿ)

ಪ್ರತಾಪರಾವ್ ಗಣಪತರಾವ್ ಜಾಧವ್ (ಶಿವಸೇನೆ)

ಜಯಂತ ಚೌಧರಿ (ಆರ್‌ಎಲ್‌ಡಿ)

ಜಿತಿನ್ ಪ್ರಸಾದ (ಬಿಜೆಪಿ)

ಶ್ರೀಪಾದ್ ನಾಯ್ಕ (ಬಿಜೆಪಿ)

ಪಂಕಜ ಚೌಧರಿ (ಬಿಜೆಪಿ)

ಕಿಶನ್ ಪಾಲ ಗುರ್ಜರ್ (ಬಿಜೆಪಿ)

ರಾಮದಾಸ್ ಅಠವಳೆ (ಆರ್‌ಪಿಐ)

ರಾಮನಾಥ ಠಾಕೂರ್ (ಜೆಡಿಯು)

ನಿತ್ಯಾನಂದ ರೈ (ಬಿಜೆಪಿ)

ಅನುಪ್ರಿಯಾ ಪಟೇಲ್ (ಅಪ್ನಾ ದಳ)

ವಿ ಸೋಮಣ್ಣ (ಬಿಜೆಪಿ)

ಡಾ. ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)

RELATED ARTICLES

LEAVE A REPLY

Please enter your comment!
Please enter your name here

Most Popular