Friday, November 22, 2024
Flats for sale
Homeಕ್ರೈಂಬೆಂಗಳೂರು ; ಅತ್ಯಾಚಾರ ಪ್ರಕರಣ : ಕೊನೆಗೂ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಬಂಧನ.

ಬೆಂಗಳೂರು ; ಅತ್ಯಾಚಾರ ಪ್ರಕರಣ : ಕೊನೆಗೂ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಬಂಧನ.

ಬೆಂಗಳೂರು ; ರಸಿಕರ ರಾಜ,ಅತ್ಯಾಚಾರಿ ಆರೋಪಿ ಪ್ರಜ್ವಲ್ ರೇವಣ್ಣ ಕೊನೆಗೂ ಬರೋಬ್ಬರಿ ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಅರೆಸ್ಟ್​ ಆಗಿದ್ದಾರೆ. ತಡರಾತ್ರಿ ಜರ್ಮನಿಯಿಂದ ಬೆಂಗಳೂರು ಇಂಟರ್​ ನ್ಯಾಷನಲ್​ ಏರ್ಪೋರ್ಟ್​ಗೆ ಬರುತ್ತಿದ್ದಂತೆ ಪ್ರಜ್ವಲ್​ ರೇವಣ್ಣರನ್ನು ಎಸ್​ಐಟಿ ಪೊಲೀಸ್​ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಭಾರೀ ಬಿಗಿ ಪೊಲೀಸ್​ ಬಂದೋಬಸ್ತ್​ ಮಧ್ಯೆ ಪ್ರಜ್ವಲ್​ ರೇವಣ್ಣರ ಬಂಧನವಾಗಿದೆ.

ಹಾಸನದಲ್ಲಿ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆನ್ನಲಾದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದು, ಕೊನೆಯೂ 34 ದಿನಗಳ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ಯರಾತ್ರಿ 12.48ಕ್ಕೆ ಆಗಮಿಸಿದ ಬೆನ್ನಲ್ಲಿಯೇ ವಿಶೇಷ ತನಿಖಾ ತಂಡ ಪೊಲೀಸರು ಬಂಧಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಏಪ್ರಿಲ್ 26ರಂದು ರಾತ್ರೋರಾತ್ರಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಿದ್ದರು. ಆನಂತರ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೆ ಅನ್ನೋದು ಕನ್ಫರ್ಮ್ ಆಗಿರಲಿಲ್ಲ. ಮೊನ್ನೆ ಮೊನ್ನೆ ಮೇ 27ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಪ್ರಜ್ವಲ್ ಮೇ 31ರಂದು ಬೆಂಗಳೂರಿಗೆ ಬಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗೋದಾಗಿ ತಿಳಿಸಿದ್ದರು. ಇದಾದ ಬೆನ್ನಲ್ಲೇ ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿದ್ರು. ಲುಫ್ತಾನ್ಸಾ ಏರ್‌ಲೈನ್ಸ್‌ LH 764 ವಿಮಾನದಲ್ಲಿ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ಕಾಯ್ದಿರಿಸಿದ್ದರು. ಕಳೆದ 34 ದಿನಗಳಿಂದ ಎಸ್‌ಐಟಿಗೆ ಚಳ್ಳೇಹಣ್ಣು ತಿನ್ನಿಸಿದ್ದ ಪ್ರಜ್ವಲ್ ನಿನ್ನೆ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ್ರು.

ಇನ್ನು ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ಸಂಸದ ಪ್ರಜ್ವಲ್ ರೇವಣ್ಣ ಮೇಲೆ ದಾಖಲಿಸಲಾಗಿದೆ. ಇನ್ನು ಪ್ರಜ್ವಲ್ ವಿರುದ್ಧ ಲುಕ್ ಔಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಗುರುತಿಸಿ ಎಸ್‌ಐಟಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರು ಎಸ್‌ಐಟಿ ಪೊಲೀಸರು ಕೂಡ ವಿಮಾನ ನಿಲ್ದಾಣದೊಳಗೆ ಹೋಗಿ ಸಿಐಎಸ್‌ಎಫ್‌ ಪೊಲೀಸರ ನೆರವಿನಿಂದ ಪ್ರಜ್ವಲ್‌ ರೇವಣ್ಣನನ್ನು ಬಂಧಸಿದ್ದಾರೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಬಳಿ ಇರುವ ವಸ್ತುಗಳುನ್ನು, ವಿಮಾನದಲ್ಲಿ ಬಂದ ಲಗ್ಗೇಜ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಜ್ವಲ್‌ ಬಳಸುತ್ತಿದ್ದ ಮೊಬೈಲ್ ಸೇರಿ ಆತನ ಬಳಿ ಇದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಇದು ಯಾವ ಮೊಬೈಲ್‌ ಎಂದು ಗೊತ್ತಾಗಿಲ್ಲ. ನಿನ್ನೆ ರಾತ್ರಿ ಎಸ್‌ಐಟಿ ಕಚೇರಿಯಲ್ಲಿಯೇ ಕಳೆದಿರುವ ಪ್ರಜ್ವಲ್‌ ಅವರನ್ನು ಇಂದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಪ್ರಜ್ವಲ್‌ ಪರ ವಕೀಲರು ಈಗಾಗಲೇ ಪೊಲೀಸ್‌ ಕಸ್ಟಡಿ ನಿರಾಕರಿಸುವ ವಾದಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular