ಬೆಂಗಳೂರು : ಬಾಡಿಗೆ ಮನೆಯಲ್ಲಿ ವಾಸವಿದ್ದಒಂದೇ ಕುಟುಂಬದ ಐವರು ಗಾಢ ನಿದ್ರೆಯಲ್ಲಿರುವಾಗ ಸಿಲಿಂಡರ್ ಸ್ಫೋಟಗೊಂಡು ಕೆನ್ನಾಲಿಗೆಗೆ ಬೆಂಕಿಯ ಸಿಲುಕಿ ಐವರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನ ಸಂಪಿಗೇಹಳ್ಳಿ ಸಮೀಪದ ಎಂಎಸ್ ನಗರದಲ್ಲಿ ನಡೆದಿದೆ.
ನೇಪಾಳ ಮೂಲದ ಕುಟುಂಬ ಸಂಪಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಡುಗೆ ಸಿಲಿಂಡರ್ ಸ್ಫೋಟಕ್ಕೆ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಮೂರು ಮಕ್ಕಳಿಗೆ ಗಂಭೀರ ಸುಟ್ಟ ಗಾಯಗಳಾಗಿದೆ.
ತಡರಾತ್ರಿ ಗ್ಯಾಸ್ ಲಿಂಕ್ ಆಗಿದ್ದು, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ನಿದ್ದೆ ಮಂಪರಿನಲ್ಲಿದ್ದವರಿಗೆ ಗಂಭೀರವಾದ ಸುಟ್ಟು ಗಾಯವಾಗಿವೆ. ಗಾಯ ಗೊಂಡವರನ್ನು ದಂಪತಿ ಮದನ್ ಚೌಹಾರ (32), ಪ್ರೇಮ್ ಜಾಲ(28) ಹಾಗೂ ಮಕ್ಕಳಾದ ಹಿರದ್ (12), ಪ್ರಶಾಂತ್ (06), ಅನಿತಾ (8) ಎಂದು ತಿಳಿದುಬಂದಿದೆ . ಒಂದೇ ಕುಂಟುಂಬದ ಐವರಿಗೆ ಶೇ.90ರಷ್ಟು ಸುಟ್ಟ ಗಾಯಗಳಿಗೆ ತುತ್ತಾಗಿದ್ದಾರೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.