Saturday, November 23, 2024
Flats for sale
Homeಜಿಲ್ಲೆಮಂಗಳೂರು : 30 ವರ್ಷಗಳ ಹಿಂದೆ ತೀರಿ ಹೋದ ವಧುವಿಗೆ ಪ್ರೇತ ಮದುವೆ ಮಾಡಲು ವರ...

ಮಂಗಳೂರು : 30 ವರ್ಷಗಳ ಹಿಂದೆ ತೀರಿ ಹೋದ ವಧುವಿಗೆ ಪ್ರೇತ ಮದುವೆ ಮಾಡಲು ವರ ಬೇಕೆಂದು ಜಾಹೀರಾತಿನ ಮೊರೆ ಹೋದ ಕುಟುಂಬಸ್ಥರು.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಸಾಮಾನ್ಯವಾಗಿ ನಡೆಯುತ್ತಾ ಇರುತ್ತೆ ಅಪಮೃತ್ಯುವಿನಿಂದ ಮೃತಪಟ್ಟ ಗಂಡು ಅಥವಾ ಹೆಣ್ಣು ವಿಗೆ ಪ್ರೇತ ಮದುವೆ ಮಾಡುವುದು ಪದ್ಧತಿ. ಆದರೆ ಇತ್ತೀಚ್ಚಿಗೆ ಪತ್ರಿಕೆಯಲ್ಲಿ ಮದುವೆಯ ಜಾಹೀರಾತು ಬಾರಿ ವೈರಲ್ ಆಗಿದೆ 30 ವರ್ಷಗಳ ಹಿಂದೆ ತೀರಿ ಹೋಗಿರುವ ಮಗಳಿಗೆ ಜೋಡಿಯನ್ನು ಹುಡುಕುತ್ತಿದೆ ಎಂದು ಪತ್ರಿಕೆಯಲ್ಲಿ ಜಾಹಿರಾತು ಬಂದಿತ್ತು,ಈ ಸುದ್ದಿ ಕೇಳಿ ಹಲವರಿಗೆ ದಿಗ್ಬ್ರಮೆ ಉಂಟಾಗಿತ್ತು ,ಏಕೆಂದರೆ ನಿಜ ಜೀವನಲ್ಲಿ ಮದುವೆಯಾಗಲು ಕಷ್ಟ ಪಡುವ ಸಂದರ್ಭದಲ್ಲಿ ಸತ್ತವರಿಗೇಕೆ ಮದುವೆ?ಎಂಬುದು ಹಲವರಲ್ಲಿ ಪ್ರಶ್ನೆ ಮೂಡಿದೆ ,ಆದರೆ ಈ ಪದ್ಧತಿಯನ್ನು ಚೈನೀಸ್ ಹಾಗೂ ಸಿಂಗಪೂರಿನ ಜನರು ಕೂಡ ಅನುಸರಿಸುತ್ತಾರೆ.

ಹೌದು ಇದು ನಿಜ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕುಟುಂಬವೊಂದು “ತಮ್ಮ ಮಗಳು 30 ವರ್ಷಗಳ ಹಿಂದೆ ನಿಧನಗೊಂಡಿದ್ದು, ನಮಗೆ 30 ವರ್ಷಗಳ ಹಿಂದೆ ನಿಧನರಾದ ವರನ ಅಗತ್ಯವಿದೆ. ಅಂತಹ ಯಾವುದೇ ವರನಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ” ಎಂದು ಪತ್ರಿಕೆಯೊಂದಕ್ಕೆ ಜಾಹೀರಾತನ್ನು ನೀಡಿದ್ದಾರೆ. ಈ ಜಾಹೀರಾತಿನ ಜೊತೆಗೆ, ಮೃತ ಹುಡುಗಿಯ ವಿವರಗಳನ್ನು ಸಹ ಸೇರಿಸಲಾಗಿದೆ. ಈ ಸುದ್ದಿ ನಮಗೆ ಆಶ್ಚರ್ಯವನ್ನುಂಟು ಮಾಡಬಹುದು ಆದರೆ ಕರಾವಳಿ ಭಾಗದ ಅದರಲ್ಲಿಯೂ ತುಳುನಾಡಿನ ಜನತೆಗೆ ಹೊಸದಲ್ಲ. ಜೊತೆಗೆ ಇದು ಅಪಹಾಸ್ಯ ಮಾಡುವ ವಿಷಯವೂ ಅಲ್ಲ. ಏಕೆಂದರೆ ಸತ್ತವರ ಮದುವೆಯನ್ನು ಮಾಡುವ ಸಂಪ್ರದಾಯ ರೂಢಿಯಲ್ಲಿದೆ. ಇದೊಂದು ನಂಬಿಕೆ, ಹಾಗಾಗಿ ಈ ಬಗ್ಗೆ ಗೊತ್ತಿಲ್ಲದವರಿಗೆ ಇದು ವಿಚಿತ್ರ ಎನಿಸಬಹುದು.

ಹಿಂದೂ ಧರ್ಮದಲ್ಲಿ ವಯಸ್ಸಿಗೆ ಬಂದಂತಹ ಹುಡುಗ- ಹುಡುಗಿಯರು ಮದುವೆ ಆಗದೆಯೇ ನಿಧನ ಹೊಂದಿದರೆ ಅವರಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ ಎಂಬುದು ತುಳುನಾಡಿನ ಜನರ ನಂಬಿಕೆಯಾಗಿದೆ. ಹಾಗಾಗಿ ಅವರಿಗೆ ಮೋಕ್ಷ ನೀಡಲು ಈ ಆಚರಣೆಯನ್ನು ಮಾಡಲಾಗುತ್ತದೆ. ಇದು ಎಲ್ಲಾ ಕುಟುಂಬಗಳಲ್ಲಿಯೂ ಇಲ್ಲ. ಆದರೆ ಕೆಲವರು ಇದನ್ನು ಕಟ್ಟುನಿಟ್ಟಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಹುಡುಗಿ ನೋಡುವ ಶಾಸ್ತ್ರ, ನಿಶ್ಚಿತಾರ್ಥ, ಜವಳಿ ಇನ್ನಿತರ ಎಲ್ಲಾ ಮದುವೆಯ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಆದರೆ ಇವೆಲ್ಲಾ ಹಿಂದೆ ಕುಟುಂಬಕ್ಕೆ ಸೀಮಿತವಾಗಿ ಗೌಪ್ಯವಾಗಿ ನಡೆಯುತ್ತಿತ್ತು, ಆದರೆ ಕಳೆದ ಕೆಲವು ವರ್ಷಗಳಿಂದ ಇದು ಮುಕ್ತವಾಗಿ ನಡೆಯುತ್ತಿದೆ. ಹಾಗಾಗಿ ಈ ಆಚರಣೆ ಬೆಳಕಿಗೆ ಬಂದಿದೆ.

ಜಾಯಿರಾತಿನ ಮೂಲಕ ಹಲವು ಕರೆಗಳು ಕುಟುಂಬಸ್ಥರಿಗೆ ಬಂದಿದ್ದು ಜನರು ಸಂಬಂಧಗಳನ್ನು ಕಳುಹಿಸಿದ್ದು ಶೀಘ್ರದಲ್ಲೇ ಎಲ್ಲಾ ರೀತಿಯ ಆಚರಣೆಗಳನ್ನು ಮಾಡಿ ಮದುವೆ ದಿನಾಂಕ ನಿಗದಿಯಾಗಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇಲ್ಲಿ ಒಪ್ಪಿಗೆಯಾದರೆ ಪ್ರೇತ ವದು ವರಗಳ ನಿಶ್ಚಿತಾರ್ಥ ಕಾರ್ಯ ನಡೆದ ಬಳಿಕ ಆಷಾಡ ಮಾಸದಲ್ಲಿ ವದು ವರರ ಕುಟುಂಬಸ್ಥರು ಸೇರಿ ಹೆಣ್ಣು ಗಂಡು ಬಿಂಬ ಗಳನ್ನೂ ಇಟ್ಟು ಎಲ್ಲ ವಿದಿವಿಧಾನಗಳಂತೆ ಮದುವೆನಡೆಸಲಿದ್ದಾರೆಂದು ಮಾಹಿತಿ ದೊರೆತಿದೆ

RELATED ARTICLES

LEAVE A REPLY

Please enter your comment!
Please enter your name here

Most Popular