Friday, November 22, 2024
Flats for sale
Homeದೇಶಪಾಟ್ನಾ : ಬಿಹಾರ ಮಾಜಿ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಕ್ಯಾನ್ಸರ್​ನಿಂದ ನಿಧನ.

ಪಾಟ್ನಾ : ಬಿಹಾರ ಮಾಜಿ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಕ್ಯಾನ್ಸರ್​ನಿಂದ ನಿಧನ.

ಪಾಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿಯವರು ಕ್ಯಾನ್ಸರ್​ನಿಂದ ನಿಧನರಾಗಿದ್ದಾರೆ.ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಮ್ಸ್‌ನಲ್ಲೇ ಅವರು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು ಮತ್ತು ಬಿಹಾರದ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅವರ ನಿಧನದ ಬಗ್ಗೆ ಮಾಹಿತಿ ನೀಡಿ ದುಃಖ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಿಹಾರ ನಿತೇಶ್ ಕುಮಾರ್ ಮೋದಿಯವರು ಉಪಮುಖ್ಯಮಂತ್ರಿಯಾಗಿದ್ದರು. ಸರಳ-ಸಜ್ಜನಿಕೆಗಾಗಿ ಹೆಸರುವಾಸಿ ಆಗಿದ್ದರು. ಆರ್ಥಿಕ ತಜ್ಞರಾಗಿದ್ದ ಮೋದಿ, ರಾಜ್ಯಸಭೆ ಸದಸ್ಯ ಆದ ಬಳಿಕ ಜಿಎಸ್ಟಿ ಮಂಡಳಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಆದರೆ ಕ್ಯಾನ್ಸರ್‌ ಪೀಡಿತರಾದ ಕಾರಣ ಇತ್ತೀಚೆಗೆ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಮರುಸ್ಥಾಪನೆ ಆದಾಗ ಅವರು ಡಿಸಿಎಂ ಹುದ್ದೆ ಸ್ವೀಕರಿಸಿರಲಿಲ್ಲ.

ಸುಶೀಲ್ ಕುಮಾರ್ ಮೋದಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಜನವರಿ 5, 1952ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ಮೋತಿಲಾಲ್ ಮೋದಿ, ತಾಯಿಯ ಹೆಸರು ರತ್ನಾದೇವಿ. ಅವರ ಪತ್ನಿ ಜೆಸ್ಸಿ ಸುಶೀಲ್ ಮೋದಿ ಕ್ರಿಶ್ಚಿಯನ್ ಧರ್ಮದವರಾಗಿದ್ದು, ಪ್ರೊಫೆಸರ್ ಆಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಓರ್ವ ಉತ್ಕರ್ಷ್​ ತಥಾಗತ, ಮತ್ತೋರ್ವ ಅಕ್ಷಯ್ ಅಮೃತಾಂಕ್ಷು. ಪಾಟ್ನಾ ವಿಜ್ಞಾನ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಅವರು 1990ರಲ್ಲಿ ಬಿಹಾರ ವಿಧಾನಸಭೆಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದಾದ ಬಳಿಕ1995 ಮತ್ತು 2000ರಲ್ಲಿಯೂ ಶಾಸಕರಾಗಿ ಆಯ್ಕೆಯಾದರು. ಸತತ ಮೂರು ಅವಧಿಗೆ ಶಾಸಕರಾಗಿದ್ದರು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular