ಮಂಗಳೂರು : ಮಂಗಳೂರು ಉಡುಪಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಿಂದ ಎಳನೀರು ಬರುವುದರಿಂದ ಮುಂಬೈ ,ದೆಹಲಿಯಲ್ಲಿ ಎಳನೀರಿಗೆ ಉತ್ತಮ ಬೇಡಿಕೆ ಇರುವುದರಿಂದ ಅತಿಯಾದ ಲಾಭಕ್ಕಾಗಿ ದೆಹಲಿಗೆ ಎಳನೀರು ರವಾನೆಯಾಗುತ್ತಿದ್ದು ದರ ಹೆಚ್ಚಾಗಲು ಕಾರಣವೆಂಬುದು ಕಡೂರು ನಿವಾಸಿ ಸುರೇಶ ರವರು ತಿಳಿಸಿದ್ದಾರೆ.
ಮಂಗಳೂರು ಹಾಗೂ ಉಡುಪಿಯಲ್ಲಿ ಎಳನೀರಿನ ದರ ಸುಮಾರು 60 ರೂ.ಗೆ ಏರಿಕೆಯಾಗಿದೆ. ಈ ಮಧ್ಯೆ, ಪೂರೈಕೆ ಕೊರತೆಯೂ ಉಂಟಾಗಿದೆ. ಸಾಕಷ್ಟು ಪೂರೈಕೆ ಇಲ್ಲದ ಮತ್ತು ಮಾರಾಟ ಹೆಚ್ಚಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆಲ್ಲ ಮಾರುಕಟ್ಟೆಗೆ ಬಂದಿದ್ದ ಎಳನೀರು ಖಾಲಿಯಾಗಿದ್ದು ದಿನದ ವ್ಯಾಪಾರವೇ ಮುಗಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.
ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆ ಇದೇ ಮೊದಲು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮಂಗಳೂರು, ಉಡುಪಿಯಲ್ಲಿ ಎಳನೀರಿನ ದರ 30 ರಿಂದ 35 ರೂ.ಗಳ ಆಸುಪಾಸಿನಲ್ಲಿರುತ್ತದೆ. ಪ್ರಸ್ತುತ, ಕುಂದಾಪುರ ಮತ್ತು ಉಡುಪಿಯಲ್ಲಿ ಎಳನೀರಿಗೆ 60 ರೂ. ಇದ್ದರೆ, ಮಂಗಳೂರಿನಲ್ಲಿ 60 ರಿಂದ 55 ರೂ.ಗೆ ಮಾರಾಟವಾಗುತ್ತಿದೆ.
ಎಳನೀರಿನ ಮಾರಾಟಗಾರರು 20 ರೂ.ಗಳ ಲಾಭಾಂಶವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂಬ ದೂರುಗಳೂ ಇದ್ದು ಹಾಗೂ ಮುಂಬೈ ದೆಹಲಿಗೆ ಹೆಚ್ಚು ದರ ನಿಗದಿಯಾಗಿರುವುದರಿಂದ ಸುಖಾಸುಮ್ಮನೆ ಬೇಡಿಕೆ ಹೆಚ್ಚಿಸಿದ್ದರೆ ಎಂದು ಎಳನೀರು ಮಾರಾಟಗಾರರು ತಿಳಿಸಿದ್ದಾರೆ. ಇವರ ಅನೇಕ ಗ್ರಾಹಕರು ಪರ್ಯಾಯವಾಗಿ ಕಬ್ಬಿನ ರಸವನ್ನು ಆರಿಸಿಕೊಳ್ಳುತ್ತಿದ್ದು ಮಳೆಗಾಲ ಆರಂಭವಾದರೆ ಎಳನೀರಿನ ಬೇಡಿಕೆ ಕುಸಿಯುವುದು ಹಾಗೂ ದರದಲ್ಲಿ ಅಲ್ಪ ಕಡಿಮೆಯಾಗುತ್ತಯೆಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.