ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲೆಯೆಂದರೆ ದೈವ್ವ ದೇವರುಗಳ ಕಾರ್ಣಿಕದ ಬೀಡು ಅಂತಾನೆ ಕರೆಯಬಹುದು. ಇಲ್ಲಿ ಭಕ್ತರು ತಮ್ಮ ಕೆಲಸ ಕಾರ್ಯಗಳನ್ನು ನೆನೆದು ಯಶಸ್ವಿಯಾಗಲು ಹರಕೆ ಹೊತ್ತು ಬರುವುದು ಇತಿಹಾಸ. ತಮ್ಮ ನೆನೆಸಿದ ಕಾರ್ಯ ಯಶಸ್ವಿಯಾದ ನಂತರ ಹೊತ್ತ ಹರಕೆಯನ್ನು ದೈವ ದೇವರಿಗೆ ಸಲ್ಲಿಸಿ ದೈವವಾದ ಮುಂದೆ ನಿಂತು ಸಮರ್ಪಿಸುವುದು ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿ.
ಅದರಂತೆಯೇ ಕೆ.ಜಿ .ಎಫ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರ ಹರಕೆಯ ನೇಮೋತ್ಸವ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ನಡೆಯಿತು.ಇದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನಲ್ಲಿರುವ ಕುಟುಂಬದ ಮನೆ. ಹೊತ್ತ ಹರಕೆಯಂತೆಯೇ ಸೋಮವಾರ ಕಿನ್ನಿಗೋಳಿ ಸಮೀಪ ತಾಳಿಪಾಡಿಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆದಿದ್ದು, ಶ್ರೀ ನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡರು. ನಟಿ ಶ್ರೀನಿಧಿ ಶೆಟ್ಟಿ ಬರುತ್ತಿದಂತೆಯೇ ಪರಿಸರದ ನಿವಾಸಿಗಳು ಒಟ್ಟುಸೇರಿ ಜನಜಂಗುಳಿಯೇ ಉಂಟಾಯಿತು .