ರಿಪ್ಪನ್‌ಪೇಟೆ ; ಸಮೀಪದ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಕಾಡಾನೆ ದಾಳಿಯಿಂದ ಸಾವಿಗೀಡಾದ ರೈತ ತಿಮ್ಮಪ್ಪಮಡಿವಾಳ ಕುಟುಂಬಕ್ಕೆ ಬಿಜೆಪಿ ಲೋಕಸಭಾ ಆಭ್ಯರ್ಥಿ ಬಿ.ವೈ.ರಾಘವೇಂದ್ರ ಇಂದು ಚುನಾವಣೆಯ ಪ್ರಚಾರದ ಒತ್ತಡದಲ್ಲೂ ಮೃತ ರೈತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದರು.
ಈ ದುರ್ಘಟನೆ ನಡೆದ ಬಗ್ಗೆ ತಿಳಿದಾಗ ನಾನು ಬೈಂದೂರಿನಲ್ಲಿದ್ದೆ ವಿಷಯ ತಿಳಿದು ಬಹಳ ನೋವಾಯಿತು ಆ ದೇವರು ತಿಮ್ಮಪ್ಪರವರ ಅತ್ಮಕ್ಕೆ ಶಾಂತಿ ನೀಡಲಿ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ವೈಯಕ್ತಿಕ ಧನ ಸಹಾಯ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಕುಟುಂಬದವರು ಅರ್ಥಿಕಾವಾಗಿ ದುರ್ಬಲರಾಗಿದ್ದು ದುಡಿಯುವ ಕೈಯನ್ನು ಕಳೆದುಕೊಂಡು ದಿಕ್ಕುತೋಚದಂತಾಗಿರುವ ರೈತ ಕುಟುಂಬಕ್ಕೆ ಆರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿಗಳೊAದಿಗೆ ಮಾತನಾಡಿದ್ದೇನೆ.ಇಲಾಖೆಯ ಮುಖ್ಯಸ್ಥರಲ್ಲೂ ಕೂಡಾ ಮಾತನಾಡಿ ಇಲಾಖೆಯಿಂದ ನೀಡಲಾಗುವ ಪರಿಹಾರದ ಹಣವನ್ನು ನೀಡುವಂತೆ ಕೊಡಲೇ ತಲುಪಿಸುವ ಕೆಲಸ ಮಾಡಬೇಕು ಎಂದರು.
ಚುನಾವಣೆ ನೀತಿ ಸಂಹಿತೆ ಇವುಗಳನ್ನು ನೋಡದೆ.ಚುನಾವಣೆ ಬೇರೆ ರೈತನ ಕಣ್ಣೀರೆ ಬೇರೆ ಮೃತ ತಿಮ್ಮಪ್ಪನ ದುರ್ಮರಣದಿಂದಾಗಿ ಕಂಗಾಲಾಗಿರುವ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ತಕ್ಷಣವೇ ನೀಡಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ,ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸುರೇಶ್‌ಸ್ವಾಮಿರಾವ್,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ,ತಾಲ್ಲೂಕ್ ಜೆಡಿಎಸ್ ಆಧ್ಯಕ್ಷ ಎನ್.ವರ್ತೇಶ್,ಬಿಜೆಪಿ ಮುಖಂಡರಾದ ಎಂ.ಎನ್.ಸುಧಾಕರ್,ಹೆಚ್.ಎಸ್.ಕೀರ್ತಿಗೌಡ, ಕೆಂಚಿಕೆರೆ ಗಣಪತಿ,ಷಣ್ಮುಖಪ್ಪ,ಇನ್ನಿತರ ಗ್ರಾಮಸ್ಥರು ಹಾಜರಿದ್ದರು.