Sunday, July 26, 2026
Homeರಾಜಕೀಯಯಾದಗಿರಿ : ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಸಿದ್ದರಾಮಣ್ಣ ನೀವು ಸ್ವಲ್ಪ ಹುಷಾರಾಗಿರಿ ಎಂದ ರಾಜೂಗೌಡ!

ಯಾದಗಿರಿ : ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಸಿದ್ದರಾಮಣ್ಣ ನೀವು ಸ್ವಲ್ಪ ಹುಷಾರಾಗಿರಿ ಎಂದ ರಾಜೂಗೌಡ!

ಯಾದಗಿರಿ : ಡಿಕೆಶಿ ಬಂದಿರೋದು ಸಿದ್ದರಾಮಣ್ಣನಿಗೆ ಒಳ್ಳೇದು ಮಾಡೋಕೆ ಅಲ್ಲ, ಸಿದ್ದರಾಮಯ್ಯ ನಿನ್ನ ಸೀಟ್‌ ಮೇಲೆ ಡಿಕೆ ಶಿವಕುಮಾರ ಕಣ್ಣಿದೆ. ಅದಕ್ಕಾಗಿ ಅವ್ರು ಏನು ಬೇಕಾದ್ರೂ ಮಾಡ್ತಾರೆ. ನಾಳೆ ಎಂಪಿ ಎಲೆಕ್ಷನ್ ಮುಗಿದ ಮೇಲೆ ನಿಮ್ಮದೇ ಸಿಡಿ ಬಿಡಬಹುದು, ಇಲ್ಲಂದ್ರೆ ಯತೀಂದ್ರ ಅವರದ್ದು ಯಾವುದಾದ್ರೂ ಸಿಡಿ ಬಿಡಬಹುದು ಹುಷಾರಾಗಿರಿ ಎಂದು ಬಿಜೆಪಿ ಅಭ್ಯರ್ಥಿ ರಾಜುಗೌಡ ಎಚ್ಚರಿಕೆ ನೀಡಿದ್ದಾರೆ .

ಹಿಂಗೇ ಮಾಡಿ ರಮೇಶ ಜಾರಕಿಹೊಳಿಯವರನ್ನ ಮನೆಗೆ ಕಳುಹಿಸಿದ್ರೂ,ಎಮ್ ಪಿ ಎಲೆಕ್ಷನ್ ಮುಗಿಯುತ್ತಲೆ ಸಿದ್ದರಾಮಯ್ಯನವರದ್ದೆ ಸಿಡಿ ಬೀಡುತ್ತಾರೆ,ಡಿಕೆಶಿಯವರಿಗೆ ಸಿಎಮ್ ಖುರ್ಚಿ ಮೇಲೆ ಕಣ್ಣಿದೆ,ಅದಕ್ಕೆ ಅವ್ರು ಎನಾದ್ರೂ ಮಾಡತ್ತಾರೆ,ಇಂತವರನ್ನು ಕರೆದುಕೊಂಡು ಓಡಾಡಬೇಡ ಸಿದ್ದರಾಮಯ್ಯ ಇಲ್ಲಾ ಅವ್ರ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಸಿಡಿ ಬೀಡುತ್ತಾರೆ .ಸಿದ್ದರಾಮಣ್ಣ ಹುಷಾರ ಆಗಿರಿ ಎಂದು ಹುಣಸಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರದಲ್ಲಿ ಅಭ್ಯರ್ಥಿ ರಾಜುಗೌಡ ಪರೋಕ್ಷವಾಗಿ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular