Saturday, November 23, 2024
Flats for sale
Homeದೇಶಬೆಂಗಳೂರು : ಪ್ರಯಾಣದ ವೇಳೆ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ವಿದ್ಯಾರ್ಥಿ...

ಬೆಂಗಳೂರು : ಪ್ರಯಾಣದ ವೇಳೆ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ವಿದ್ಯಾರ್ಥಿ ಸೆರೆ.

ಬೆಂಗಳೂರು : ಪ್ರಯಾಣದ ವೇಳೆ ವಿಮಾನದ ತುರ್ತು ನಿರ್ಗಮನದ ವೇಳೆ ಬಾಗಿಲು ತೆರೆಯಲು ಯತ್ನಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಮೇಲೆ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಬಂಕುರಾ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಕೌಶಿಕ್ ಕರಣ್(22) ಬಂಧಿತ ಆರೋಪಿಯಾಗಿದ್ದು, ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಕಳೆದ ಏಪ್ರಿಲ್ ೨೯ರಂದು ರಾತ್ರಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದ ಕೌಶಿಕ್ ಕರಣ್ ವಿರುದ್ಧ ಇಂಡಿಗೋ ಏರ್‌ಲೈನ್ಸ್ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಆತನನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದರು.

ಇಂಡಿಗೋ ವಿಮಾನ ಸಂಖ್ಯೆ 6E-6314 ಏಪ್ರಿಲ್ 29 ರಂದು ಕೋಲ್ಕತ್ತಾದಿAದ ರಾತ್ರಿ 8.15 ಕ್ಕೆ ಟೇಕ್ ಆಫ್ ಆಗಿತ್ತು. ರಾತ್ರಿ 10.30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ತಲುಪಬೇಕಿತ್ತು. ಆರೋಪಿ ಕರಣ್‌ಗೆ ಆಸನ ಸಂಖ್ಯೆ 18E ಅನ್ನು ನಿಗದಿಪಡಿಸಲಾಗಿತ್ತು. ಆದರೆ ಆತ ತುರ್ತು ನಿರ್ಗಮನ ಬಾಗಿಲು ಇರುವ ಸೀಟ್ ಸಂಖ್ಯೆ 18E ಅನ್ನು ವಿನಂತಿ ಮಾಡಿ ಪಡೆದುಕೊಂಡಿದ್ದ. ವಿಮಾನವು ಬೆಂಗಳೂರು ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಾಗ ತುರ್ತು ನಿರ್ಗಮನ ಬಾಗಿಲಿನ ಸ್ಟಾರ್ ಬೋರ್ಡ್ ಬದಿಯಿಂದ (ಬಲಭಾಗ)
ಹ್ಯಾಂಡಲ್‌ನಲ್ಲಿದ್ದ ಫ್ಲಾಪ್ ಕವರ್ಅ ನ್ನು ತೆಗೆದುಹಾಕಿದ್ದಾನೆ. ಆದರೆ, ಕರಣ್ ಬಾಗಿಲು ತೆರೆಯದಂತೆ ಸಿಬ್ಬAದಿ ತಡೆದಿದ್ದಾರೆ ಎಂದು ಸಿಐಸ್‌ಎಫ್ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ವಿಮಾನದ ಸಿಬ್ಬಂದಿ ಆತನನ್ನು ಇಂಡಿಗೋ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿತ್ತು. ಏರ್‌ಲೈನ್ಸ್ ಸಿಬ್ಬಂದಿ 12.33ಕ್ಕೆ ಆರೋಪಿಯನ್ನು ಕೆಐಎ ಪೊಲೀಸರಿಗೆ ಹಸ್ತಾಂತರಿಸಿದರು. ಈ ವಿಚಾರವಾಗಿ ಇಂಡಿಗೋ ಸಿಬ್ಬಂದಿ ಮೊಹಮ್ಮದ್ ಉಮರ್ ಕೆಐಎಗೆ ದೂರು ಸಲ್ಲಿಸಿದ್ದರು.

ಇಂಡಿಗೋ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು `ಐಪಿಸಿ 1860’ ರ ಸೆಕ್ಷನ್ 336 ರ (ದುಡುಕಿನ ಅಥವಾ ನಿರ್ಲಕ್ಸ್ಯದ ಕೃತ್ಯಗಳ ಮೂಲಕ ಇತರರ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದಕ್ಕೆ ಸಂಬಂದಿಸಿದ್ದು ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಹಿಂದೆ ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದು ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಪ್ರಮಾದವಶಾತ್ ಆ ರೀತಿ ಆಗಿದೆ ಎಂದು ನಂತರ ಅವರು ಸ್ಪಷ್ಟನೆ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular