ನವದೆಹಲಿ : ಹದಿಹರೆಯದ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ಮತಾಂತರ ಮಾಡುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೇಶದಲ್ಲಿ ಅಶಾಂತೀಯ ವಾತಾವರಣ ಸೃಷ್ಟಿಸುತಿದ್ದು ಲೋಕಸಭಾ ಚುನಾವಣೆ ಕಾವಿನ ನಡುವೆ ಲವ್ ಜಿಹಾದ್ ಪ್ರಕರಣಗಳು ತೀವ್ರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ವಾಯವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶುಕ್ರವಾರ ಮಹಿಳೆಯೊಬ್ಬರನ್ನು ಅಪ್ರಾಪ್ತ ಹುಡುಗ ಗುಂಡಿಕ್ಕಿ ಕೊಂದ ಘಟನೆ ವರದಿಯಾಗಿದೆ.ಮುಸ್ಲಿಮ್ ಸಮುದಾಯದ 18 ವರ್ಷದ ಯುವಕ ಜಹಾಂಗೀರ್‌ಪುರಿ ನಾರ್ತ್‌ವೆಸ್ಟ್‌ನ ಹಿಂದೂ ನಿವಾಸಿಯಾಗಿರುವ 15 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಭಯಭೀತಗೊಂಡ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಮುಸ್ಲಿಮ್ ಯುವಕ, ಬಾಲಕಿಯನ್ನು ಹತ್ಯೆ ಮಾಡಲು ಗೆಳೆಯರ ಜೊತೆ ಆಕೆಯ ಮನೆಗೆ ನುಗ್ಗಿದ್ದಾನೆ. ಈ ವೇಳೆ ಬಾಲಕಿ ಮನೆಯಲ್ಲಿ ಇಲ್ಲದ ಕಾರಣ ಆಕೆಯ ತಾಯಿಗೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
15 ವರ್ಷದ ವಿದ್ಯಾರ್ಥಿನಿಯ ಹಿಂದೆ ಬಿದ್ದ ಈ ಮುಸ್ಲಿಮ್ ಯುವಕ, ಕಾಲೇಜು, ರಸ್ತೆಗಳಲ್ಲಿ ಈಕೆಗೆ ಕಿರುಕುಳ ನೀಡಿದ್ದಾನೆ. ಯವಕನ ಕಾಟ ತಾಳಲಾರದೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಇತ್ತ ಪೋಷಕರು ಮುಸ್ಲಿಮ್ ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಹಾಸ್ಟೆಲ್‌ನಿಂದ ಬಿಡಿಸಿದ್ದಾರೆ. ಇತ್ತ ಪೊಲೀಸರಿಗೂ ಈ ಕುರಿತು ಪೋಷಕರು ಮಾಹಿತಿ ನೀಡಿದ್ದಾರೆ. ಮುಸ್ಲಿಮ್ ಯುವಕ ವಿದ್ಯಾರ್ಥಿಯಾಗಿರುವ ಕಾರಣ ಎಫ್ಐಆರ್‌ಗಿಂತ ಬುದ್ಧಿವಾದ ಹೇಳುವಂತೆ ಪೊಲೀಸರಿಗೆ ಪೋಷಕರು ಮನವಿ ಮಾಡಿದ್ದಾರೆ. ಈ ಭೀಕರ ಕೃತ್ಯ ಎಸಗುವಾಗ ಆರೋಪಿ ಒಬ್ಬನೇ ಅಲ್ಲ, ಆತನ ಇಬ್ಬರು ಸ್ನೇಹಿತರು ಪಿಸ್ತೂಲ್ ಖರೀದಿಸಿ ಸಂತ್ರಸ್ತೆಗೆ ಗುಂಡು ಹಾರಿಸಿದಾಗ ಆತನ ಜೊತೆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆಗೆ ಒಂದು ದಿನ ಮೊದಲು, ಅಪ್ರಾಪ್ತ ವಯಸ್ಕ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಪಿಸ್ತೂಲ್ ಮತ್ತು ಬುಲೆಟ್‌ಗಳ ಫೋಟೋವನ್ನು ಹಂಚಿಕೊಂಡಿದ್ದಾನೆ ಎಂದು ಹೇಳಲಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಪೋಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ ವರದಿಯ ಪ್ರಕಾರ, ಆರೋಪಿಗಳು ಟ್ಯೂಷನ್‌ಗೆ ಹೋದಾಗಲೆಲ್ಲಾ ಬಾಲಕಿಯನ್ನು ಹಿಂಬಾಲಿಸುತ್ತಿದ್ದರು ಎಂದು ಮಹಿಳೆಯ ಕುಟುಂಬದವರು ಹೇಳಿದ್ದಾರೆ. ಬಾಲಕಿ ತನ್ನ ಮನೆಯವರಿಗೆ ತಿಳಿಸಿದಾಗ, ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ಬಾಲಕಿಗೆ ಬಾಲಕನಿಂದ ಕಿರುಕುಳ ಮುಂದುವರಿದಿದೆ. ಕೊನೆಯ ಪ್ರಯತ್ನವಾಗಿ ಮನೆಯವರು ಬಾಲಕಿಯನ್ನು ಹಾಸ್ಟೆಲ್‌ಗೆ ಸೇರಿಸಿದ್ದಾರೆ.ಆದರೆ ಈತನ ಬೆದರಿಕೆ ಅರಿತಿದ್ದ ಪೋಷಕರು ಬಾಲಕಿಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಮನೆಯಲ್ಲಿ ತಾಯಿ ಹಾಗೂ ಆಪ್ತ ಸಂಬಂಧಿಕರು ಮಾತ್ರ ಇದ್ದರು. ಬಾಲಕಿ ಕೈಗೆ ಸಿಗದಾಗ, ಆರೋಪಿಯ ಆಕ್ರೋಶ ಹೆಚ್ಚಾಗಿದೆ. ಬಾಲಕಿ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಇತ್ತ ಲವ್ ಜಿಹಾದ್ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಕ್ಯಾರೇ ಎನ್ನದ ಪೋಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.ಹತ್ಯೆ ಮಾಡಿ ಆರೋಪಿ ಹಾಗೂ ಆತನ ಸಹಚರರು ಪರಾರಿಯಾಗಿದ್ದು ತೀವ್ರ ಗಾಯಗೊಂಡು ಕುಸಿದು ಬಿದ್ದ ಬಾಲಕಿ ತಾಯಿಯನ್ನು ಬಾಬು ಜಗಜೀವನ್ ಆಸ್ಪತ್ರೆಗೆ ದಾಖಲಿಸಲಾಗಿಸುವ ಮೊದಲೇ ಬಾಲಕಿ ತಾಯಿ ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.