Friday, November 22, 2024
Flats for sale
Homeರಾಜಕೀಯಬೆಂಗಳೂರು : ಮತದಾನ ಮಾಡದೇ ದೂರ ಉಳಿದ "ಸತ್ತ ಪ್ರಜೆಗಳಿಗೆ ಶ್ರದ್ಧಾಂಜಲಿ" ಎಂದು ಬ್ಯಾನರ್ ಹಾಕಿ...

ಬೆಂಗಳೂರು : ಮತದಾನ ಮಾಡದೇ ದೂರ ಉಳಿದ “ಸತ್ತ ಪ್ರಜೆಗಳಿಗೆ ಶ್ರದ್ಧಾಂಜಲಿ” ಎಂದು ಬ್ಯಾನರ್ ಹಾಕಿ ಆಕ್ರೋಶ​.

ಬೆಂಗಳೂರು : ಪ್ರಜಾಪ್ರಭುತ್ವದಲ್ಲಿ ಮತದಾನ ಎಂದರೆ ಹಬ್ಬ ಅಂತ ಹೇಳಬಹುದು ಆದರೆ ಪ್ರಜೆಗಳೇ ಆ ಹಬ್ಬವನ್ನು ಆಚರಿಸದಿದ್ದರೆ ಪ್ರಜಾಪ್ರಭುತ್ವದಲ್ಲಿ ಅಲ್ಲೊಲ್ಲ ಕಲ್ಲೋಲ ಆಗುತ್ತಯೆಂಬುದು ಸ್ವಲ್ಪನೂ ಹರಿವಿಲ್ಲದಂತಾಗಿದೆ.ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುಕ್ರವಾರ ನಡೆಯಿತು. ಬೆಂಗಳೂರಿನಲ್ಲಿ ಪ್ರತಿ ಬಾರಿಯಂತೆ ಕಡಿಮೆ ಮತದಾನವಾಗಿದೆ.

ಇದೀಗ ಚುನಾವಣಾ ಆಯೋಗ ಅಷ್ಟೊಂದು ಪ್ರಚಾರ ಮಾಡಿದ ನಂತರವೂ ಮತದಾನದಿಂದ ದೂರ ಉಳಿದು ಬದುಕಿದ್ದರೂ ಸತ್ತಂತೆ ವರ್ತಿಸಿದ ಬೆಂಗಳೂರು ನಗರದ ಸುಶಿಕ್ಷತ ಸತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿಗಳು” ಎಂದು ಆಕ್ರೋಶಗೊಂಡ ಕೆಲವರು ಮತದಾನ ಮಾಡದವರು ಬದುಕಿದ್ದು ಸತ್ತಂತೆ ಅಂತ ರಸ್ತೆ ಬದಿಗಳಲ್ಲಿ ಬ್ಯಾನರ್​ ಹಾಕಿದ್ದಾರೆ.ಬೆಂಗಳೂರಿನಲ್ಲಿ ಮತದಾನ ಮಾಡುವ ಹಕ್ಕಿದ್ದರೂ ಮತ ಹಾಕಿಲ್ಲ. ಇವರು ಬದುಕಿದ್ದು ಸತ್ತಂತೆ” ಎಂದು ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯದ 14 ಕ್ಷೇತ್ರಗಳಲ್ಲಿನ ಶೇಕಡಾವಾರು ಮತದಾನ.
ಆದರೆ ಕಳೆದ ಬಾರಿ ರಾಜ್ಯದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಕಡಿಮೆಯಾಗಿದೆ.ರಾಜ್ಯದ 14 ಕ್ಷೇತ್ರಗಳಲ್ಲಿ ಒಟ್ಟು 69.23 ರಷ್ಟು ಮತದಾನವಾಗಿದ್ದು,ಇದರಲ್ಲಿ ಅತಿ ಕಡಿಮೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 52.81 ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇಕಡಾ 54.42 ರಷ್ಟು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇಕಡಾ 67.29 ರಷ್ಟು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 53.15 ರಷ್ಟು, ಚಾಮರಾಜನಗರ ಕ್ಷೇತ್ರದಲ್ಲಿ ಶೇ 76.59 ರಷ್ಟು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 76.82 ರಷ್ಟು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ 73.11 ರಷ್ಟು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇ 77.43 ರಷ್ಟು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ 77.51 ರಷ್ಟು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇ 78.07 ರಷ್ಟು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ 81.48 ರಷ್ಟು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇ 70.45 ರಷ್ಟು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇ 77.70 ರಷ್ಟು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ 76.06 ರಷ್ಟು ಮತದಾನವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular