Saturday, November 23, 2024
Flats for sale
Homeಕ್ರೈಂಬೆಂಗಳೂರು : ಐಟಿ ಬಿಟಿ ಕಂಪನಿಗಳಿಗೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ ಉಗ್ರರು,ಹಿಂದೂಗಳನ್ನು ಗುರಿಯಾಗಿಸಿದ...

ಬೆಂಗಳೂರು : ಐಟಿ ಬಿಟಿ ಕಂಪನಿಗಳಿಗೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ ಉಗ್ರರು,ಹಿಂದೂಗಳನ್ನು ಗುರಿಯಾಗಿಸಿದ ದೇಶದ್ರೋಹಿಗಳು,ಎನ್ ಐಎ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ.

ಬೆಂಗಳೂರು : ಈ ದೇಶ ದ್ರೋಹಿಗಳೇ ಇಷ್ಟು ಅವರಿಗೆ ದೇಶದ ಮೇಲೆ ಪ್ರೀತಿ ಇರುವುದೇ ಇಲ್ಲ. ವೈಟ್‌ಫೀಲ್ಡ್ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಬಾಂಬರ್ ಸೇರಿ ಇಬ್ಬರು ಶಂಕಿತ ಉಗ್ರರು ಬೆಂಗಳೂರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಐಟಿ ಬಿಟಿ ಹಬ್ ಮೇಲೆಯೇ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಆತಂಕಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ)ಅಧಿಕಾರಿಗಳ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಬಾಂಬರ್ ಸೇರಿ ಇಬ್ಬರು ಶಂಕಿತ ಉಗ್ರರನ್ನು ನಗರದ ರಹಸ್ಯ ಸ್ಥಳದಲ್ಲಿ ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು,ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ರಾಮೇಶ್ವರಂ ಕೆಫೆ ಸ್ಪೋಟದ ಬಾಂಬರ್ ಸೇರಿ ಶಂಕಿತ ಉಗ್ರರ ಗುರಿ ಮುಖ್ಯವಾಗಿ ಹಿಂದೂಗಳಾಗಿದ್ದು, ಐಟಿ ಬಿಟಿ ಕಂಪನಿಗಳ ನಡುವೆಯೇ ಬಾಂಬ್ ಇಡಲು ಮೊದಲು ಸಂಚು ಮಾಡಿದ್ದರು.ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್)ವಿಧ್ವಂಸಕ ಕೃತ್ಯನಡೆಸಬೇಕೆಂದು ಪಿತೂರಿ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಎಸ್‌ಎಜೆಡ್ ಏರಿಯಾದಲ್ಲಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಸಾಫ್ಟ್ವೇರ್ ಹಾರ್ಡ್ ವೇರ್ ಕಂಪನಿಗಳಿವೆ. ಸಾವಿರಾರು ಮಂದಿ ಇಂಜಿನಿಯರ್ ಗಳು ಸಿಬ್ಬಂದಿ ಕೆಲಸ ಮಾಡುತ್ತಿದ್ದು,ಇಲ್ಲಿ ಸ್ಫೋಟ ನಡೆಸಿದರೆ ದೇಶ ಹಾಗೂ ವಿದೇಶಗಳಲ್ಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಕೃತ್ಯ ಅಂತಾರಾಷ್ಟ್ರೀಯಯವಾಗಿ ಮಿAಚುತ್ತದೆ ಎಂದು ಪಾತಕಿಗಳು ವೈಟ್‌ಫೀಲ್ಡ್ ನ ಹಲವೆಡೆ ಓಡಾಡಿದ್ದರು.

ಅದರೆ ಐಟಿಬಿಟಿ ಏರಿಯಾದಲ್ಲಿ ಬಾಂಬ್ ಇಡುವುದು ಅಷ್ಟು ಸುಲಭವಲ್ಲ ಎಂದು ಅವರಿಗೆ ಮನವರಿಕೆಯಾಗಿತ್ತು.ಕಂಪನಿಗಳು ಇರುವ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ, ಸಿಸಿಟಿವಿಗಳ ಕಣ್ಗಾವಲು, ಮೆಟಲ್ ಡಿಟೆಕ್ಟರ್ಸ್ ಕಂಡುಬಂದಿದ್ದು , ಕಂಪನಿ ಕಂಪೌAಡ್‌ಗಳ ಒಳಗೆ ಹೋಗುವುದು ಅಷ್ಟು ಸುಲಭವಲ್ಲ ಎಂದು ಅರ್ಥವಾಗಿತ್ತು. ನಂತರ ಸಂಚು ಬದಲಿಸಿ, ಅದೇ ಪ್ರದೇಶದಲ್ಲಿ ಸ್ಫೋಟ ಮಾಡಬೇಕು ಎಂದು ತೀರ್ಮಾನಿಸಿದ್ದರು.

ಈ ವೇಳೆ ಅವರಿಗೆ ಕಂಡಿದ್ದು ವೈಟ್‌ಫೀಲ್ಡ್ ರಾಮೇಶ್ವರಂ ಕೆಫೆ. ಅತಿ ಹೆಚ್ಚು ಮಂದಿ ಸೇರುತ್ತಾರೆ, ಇಲ್ಲಿಗೂ ಸಾಫ್ಟ್ ವೇರ್ ಸಿಬ್ಬಂದಿ ಗಳು ಬರಲಿದ್ದಾರೆ. ಕೆಫೆ ಒಳ ಹೋಗಲು ಯಾವುದೇ ಅಡೆತಡೆ ಇರುವುದಿಲ್ಲ. ಭದ್ರತೆ, ಮೆಟಲ್ ಡಿಟೆಕ್ಟರ್ ಕೂಡ ಇಲ್ಲ. ಆದ್ದರಿಂದ ಬಾಂಬ್ ಸ್ಫೋಟ ನಡೆಸಲು ರಾಮೇಶ್ವರಂ ಕೆಫೆ ಸೂಕ್ತ ಸ್ಥಳ ಎಂದು ಆಯ್ಕೆ ಮಾಡಿದ್ದರು.

ಅಲ್ಲದೆ ಇದೇ ವೇಳೆ ರಾಮಮಂದಿರ ಕೂಡ ಉದ್ಘಾಟನೆಯಾಗಿದ್ದು, ಈ ಸಮಯದಲ್ಲಿ ಕೆಫೆ ಮುಂಭಾಗದಲ್ಲಿ ಸಂಭ್ರಮಾಚರಣೆ ಕೂಡ ನಡೆದಿತ್ತು. ಮಾರ್ಚ್ 1 ರಂದು ಕೆಫೆಯಲಿ ಬಾಂಬ್ ಇಟ್ಟು ಸ್ಫೋಟ ನಡೆಸಲಾಗಿತ್ತು. ಕೇವಲ ಸಿಸಿಟಿವಿ ಫೂಟೇಜ್‌ನ ಪ್ರಾಥಮಿಕ ಸಾಕ್ಷ್ಯ ಗಳನ್ನು ಇಟ್ಟುಕೊಂಡು ಎನ್‌ಐಎ ದೇಶಾದ್ಯಂತ ಭಾರಿ ಪ್ರಮಾಣದ ತಲಾಶೆ ನಡೆಸಿತ್ತು. ಕೊನೆಗೂ ಕೋಲ್ಕತ್ತಾದಲ್ಲಿ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.

ಉಗ್ರರು ಕೋಲ್ಕತ್ತಾದಲ್ಲಿ ಅಡಗಿರುವುದು ಎನ್‌ಐಎಗೆ ಗೊತ್ತಾಗಿದ್ದು ಕುತೂಹಲಕಾರಿಯಾಗಿದೆ. ಮಾರ್ಚ್ 1ರಂದು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸಿದ ನಂತರ ಇಬ್ಬರೂ ರಾಜ್ಯದಿಂದ ಪರಾರಿಯಾಗಿ ತಮಿಳುನಾಡು, ಒಡಿಶಾಗಳಲ್ಲಿ ಸುತ್ತಾಡಿ ಪಶ್ಚಿಮ ಬಂಗಾಳ ಸೇರಿಕೊಂಡಿದ್ದರು. ಹಲವಾರು ದಿನ ಸುತ್ತಾಡಿ ಕೈಯಲ್ಲಿದ್ದ ಹಣ ಖಾಲಿಯಾಗಿತ್ತು.

ಹ್ಯಾಂಡ್ಲರ್ ಮೂಲಕ ಇವರ ಬೇನಾಮಿ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತಿತ್ತು. ಶಂಕಿತರು ಬಳಸುತ್ತಿದ್ದ ಅಕೌಂಟ್ ಮಾಹಿತಿಯನ್ನು ಎನ್ ಐಎ ಸಂಗ್ರಹಿಸಿತ್ತು. ಇದೇ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು. ಅಂತಿಮವಾಗಿ ಕೋಲ್ಕತ್ತಾದಲ್ಲಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ.

ಹಾಗಾಗಿ ಕೋಲ್ಕತ್ತಾದಲ್ಲಿ ತನಿಖಾ ತಂಡ ಬೀಡುಬಿಟ್ಟಿತ್ತು. ನಂತರ ಅಲ್ಲಿನ ಲಾಡ್ಜ್ಗಳ ಲೆಡ್ಜರ್‌ಗಳು
ಹಾಗೂ ಸಿಸಿಟಿವಿ ಫೂಟೇಜ್‌ಗಳನ್ನು ಇಟ್ಟುಕೊಂಡು ಪರಿಶೀಲಿಸಲಾಗಿತ್ತು. ನಕಲಿ ಗುರುತಿನ ದಾಖಲೆ ನೀಡಿ ಲಾಡ್ಜ್ನಲ್ಲಿ ವಾಸವಾಗಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular