Friday, March 13, 2026
Flats for sale
Homeರಾಜಕೀಯಚಿಕ್ಕೋಡಿ : ಜಾತಿ-ಜಾತಿ ನಡುವೆ ವಿಷ ಬೀಜ ಬಿತ್ತುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ...

ಚಿಕ್ಕೋಡಿ : ಜಾತಿ-ಜಾತಿ ನಡುವೆ ವಿಷ ಬೀಜ ಬಿತ್ತುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ : ಬಸವರಾಜ್ ಯತ್ನಳ.

ಚಿಕ್ಕೋಡಿ : ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಪರಪ್ರಚಾರದ ವೇಳೆ ಜನರ ಒಲವು ಬಿಜೆಪಿಯ ಅಬ್ಯರ್ಥಿ ಮೇಲಿದೆ ಕಾಂಗ್ರೆಸ್ ನಾಯಕರೂ ಕೂಡ ಬಿಜೆಪಿಯ ಅಣ್ಣಾಸಾಬ ಜೊಲ್ಲೆ ಅವರನ್ನು ಬೆಂಬಲಿಸುತ್ತಾರೆ ಅವರ ಗೆಲುವು ಖಚಿತ ಬಹಿರಂಗ ಪ್ರಚಾರ ಸಭೆಯಲ್ಲಿ ಕುಟುಂಬ ರಾಜಕಾರಣ ವಿರುದ್ದ ಬಸವರಾಜ್ ಯತ್ನಾಳ ಗುಡುಗಿದ್ದಾರೆ.

ಪ್ರತಿ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಅವರ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಮೋದಿಯವರೇ ಹೇಳಿದ್ದಾರೆ. ಅಗ್ನಿಪಥ ಯೋಜನೆ ಕೈಬಿಡುವ ಉಲ್ಲೇಖವಿದೆ ಸ್ವಾತಂತ್ರ್ಯ ನಂತರ ನೆಹರು ಮಾಡಿದ ಪ್ರಮಾದಗಳಿಂದಲೇ ದೇಶದಲ್ಲಿ ಅರಾಜಕತೆ ಉಂಟಾಯಿತು.ಜಮ್ಮು ಕಾಶ್ಮೀರಕ್ಕೆ 370 ವಿಧಿ ಜಾರಿಗೆ ತಂದಿದ್ದರು ಆದರೆ ಪ್ರಧಾನಿ ಮೋದಿ ಅದನ್ನು ರದ್ದುಗೊಳಿಸಿದರು ಭಾರತ ಮತ್ತು ಸನಾತನ ಧರ್ಮದ ಉಳಿವಿಗಾಗಿ ಮೂರನೆ ಬಾರಿ ಮೋದಿ ಪ್ರಧಾನಿಯಾಗಬೇಕು ಮೋದಿ ಪ್ರಧಾನಿ ಆದರೆ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಮೋದಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ನನಗೆ 1 ಲಕ್ಷ 11 ಸಾವಿರಕ್ಕೂ ಹೆಚ್ಚು ಮತಗಳನ್ನು ಕೊಟ್ಟಿರುವಂತೆ ಈ ಚುನಾವಣೆಯಲ್ಲಿಯೂ ಸಹ ಕಳೆದ ಚುನಾವಣೆಗಿಂತ ಹೆಚ್ಚು ಮತಗಳನ್ನು ಹೆಚ್ಚೂವರಿಯಾಗಿ ಕೊಡುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲ ಪಡಿಸಬೇಕು ಎಂದು ಬಹಿರಂಗ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಮತಯಾಚನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಪವಾಡ ಪುರುಷ, 500 ವರ್ಷಗಳ ಅವಿರತ ಹೋರಾಟ, ಲಕ್ಷಾಂತರ ಕರ ಸೇವಕರ ಬಲಿದಾನ ನಡೆದಿತ್ತು ಆದರೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರ ಆಶಯದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರು. ಜಾತೀಯ ವಿಷ ಬೀಜ ಬಿತ್ತುವ ಮೂಲಕ ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಇದಕ್ಕೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು. ಸಂಸದನಾಗಿ ಐದು ವರ್ಷಗಳ ಅವಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅವಧಿ ಕರೋನಾ ಮತ್ತು ಪ್ರವಾಹದಂತಹ ಸಮಸ್ಯೆಗೆ ಮೀಸಲಿಡಬೇಕಾಯಿತು ಇನ್ನುಳಿದ ಅವಧಿಯಲ್ಲಿ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಿರುವೆ. ಅಥಣಿ ಕ್ಷೇತ್ರದಲ್ಲಿ ಪಿ.ಎಮ್.ಜಿ.ಎಸ್.ವೈ ಯೋಜನೆಯಡಿ 25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಸಂಸದ ನಿಧಿಯಲ್ಲಿ 2 ಕೋಟಿ 97 ಲಕ್ಷ ರೂ‌.ಅನುದಾನದಲ್ಲಿ ಅಂಬ್ಯುಲೆನ್ಸ, ಸಿಸಿ ಕ್ಯಾಮರಾ ಅಳವಡಿಕೆ, ಬಸ್ ಶೆಲ್ಟರ್, ಸಮುದಾಯ ಭವನಗಳನ್ನು ನಿರ್ಮಾಸಲಾಗಿದೆ ಎಂದರು.

ಅಥಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 4480 ಕೋಟಿ ಅನುದಾನ ಮಂಜೂರು ಮಾಡಿಸಿದ್ದು ಅಲ್ಲದೆ ಕೆ.ಎನ್.ಎನ್ ಮೂಲಕ ಝುಂಜರವಾಡದಲ್ಲಿ 1 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಕೈ ಗೊಂಡಿದ್ದೇವೆ . ನನ್ನ ಧರ್ಮ ಪತ್ನಿ ಶಶಿಕಲಾ ಜೊಲ್ಲೆಯವರು ರಾಜ್ಯ ಸರಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ದೇಶದ ಮತದಾರರು ಮೋದಿ ಗ್ಯಾರಂಟಿ ಮೇಲೆ ವಿಶ್ಚಾಸ ಇಟ್ಟಿದ್ದರಿಂದ ದೇಶದಲ್ಲಿ ಮೂರನೇ ಬಾರಿಯೂ ಸಹ ನರೇಂದ್ರ ಮೋದಿಯವರೇ ಪ್ರಧಾನಿಗಳಾಗುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ.10 ವರ್ಷಗಳ ಅವರ ಅವಧಿಯಲ್ಲಿ 500 ವರ್ಷಗಳಿಂದ ಸಾಧ್ಯವಾಗದ ರಾಮ ಮಂದಿರದ ನಿರ್ಮಾಣ, 75 ವರ್ಷಗಳಿಂದ ಸಾಧ್ಯವಾಗದ ಅನುಚ್ಛೇದ 370 ಕಲಂ ರದ್ದತಿ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡ, ಅಲ್ಪ ಸಂಖ್ಯಾತ, ರೈತ, ಬಡ, ನಿರ್ಗತಿಕರ, ವಿದ್ಯಾರ್ಥಿಗಳ, ಮಹಿಳೆಯರ, ಕಾರ್ಮಿಕರ ಮತ್ತು ಎಲ್ಲ ವರ್ಗದವರ ಅನಕೂಲಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಈ ಬಾರಿಯೂ ದೇಶದಲ್ಲಿ 400 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular