ಬೆಂಗಳೂರು : ನಿರಂತರ ದೈಹಿಕ ಹಿಂಸೆ,ಚಿತ್ರಹಿಂಸೆ ಕೊಡುತಿದ್ದ ಹೆಂಡತಿ ಡೈವೋರ್ಸ್ ಗೆ ಅರ್ಜಿಹಾಕಿದ್ದಳು ಇದರಿಂದ ಕೋಪಗೊಂಡ ಗಂಡ ಸೋಷಿಯಲ್ ಮೀಡಿಯಾದಲ್ಲಿ ಕಾಲ್ಗರ್ಲ್ ಅಂತ ಫೋನ್ ನಂಬರ್, ಫೋಟೋ ಹಾಕಿ ಪೋಸ್ಟ್ ಶೇರ್ ಮಾಡಿರುವ ಘಟನೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕರಿ ಸತ್ಯನಾರಾಯಣ ರೆಡ್ಡಿ ಎನ್ನುವ ವ್ಯಕ್ತಿಯು ಕಲಾಶಶಿ ಎಂಬ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ತನ್ನ ಹೆಂಡತಿಯ ಫೋನ್ ನಂಬರ್ ಮತ್ತು ಫೋಟೋ ಶೇರ್ ಮಾಡಿದ್ದಾನೆ. ಕಾಲ್ಗರ್ಲ್ ಬೇಕಾಗಿದ್ದರೆ ಕರೆ ಮಾಡಿ ಎಂದು ಫೋಸ್ಟ್ ಶೇರ್ ಮಾಡಿದ್ದಾನೆ. ಪೋಸ್ಟ್ ಹಾಕಿದ್ದೆ ತಡ ಹೆಂಡತಿಗೆ ನಿರಂತರ ಫೋನ್ ಕಾಲ್ಸ್ ಬರಲು ಪ್ರಾರಂಭಿಸಿವೆ. ಅಲ್ಲದೇ ಪೋಸ್ಟ್ನಲ್ಲಿ ಹೆಂಡತಿಯ ಸಹೋದರನ ನಂಬರ್ ಕೂಡ ಆತ ಹಾಕಿದ್ದಾನೆ. ಸದ್ಯ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಪತಿರಾಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
2019ರಲ್ಲಿ ವಿವಾಹವಾಗಿದ್ದ ಈ ದಂಪತಿ ಒಂದು ವರ್ಷದಿಂದ ಬೇರೆ ಬೇರೆಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಪತಿಯು ದೈಹಿಕ ಮತ್ತು ಮಾನಸಿಕ ಹಿಂದು ನೀಡುತ್ತಿದ್ದುದರಿಂದ ಪತ್ನಿ ಆತನಿಂದ ದೂರವಾಗಿದ್ದಳು. ಇದನ್ನೇ ನೆಪ ಮಾಡಿಕೊಂಡಿದ್ದ ಆರೋಪಿ ಪತ್ನಿ ವಿರುದ್ಧ ಸೇಡು ತೀರಿಸಲು ಸಾಮಾಜಿಕ ಮಾಧ್ಯಮ ಫೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಮಹಿಳೆ ಹಾಗೂ ಆತನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವ ವ್ಯಕ್ತಿ ಯ ಹೆಸರು ಸತ್ಯನಾರಾಯಣ ರೆಡ್ಡಿ ಎಂಬುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ. ಆತ ಕಲಾಶಶಿ ಎಂಬ ಪೇಜ್ ಕ್ರಿಯೇಟ್ ಮಾಡಿ ಅದರಲ್ಲಿ ವಿಚ್ಛೇದನ ನೀಡಿರುವ ಪತ್ನಿ, ಆಕೆಯ ಸಹೋದರಿ ಹಾಗೂ ಸಹೋದರನ ನಂಬರ್ ಹಾಕಿದ್ದಾನೆ ಎಂದು ಹೇಳಲಾಗಿದೆ.
ತನ್ನ ದುಷ್ಟಬುದ್ಧಿಯನ್ನು ತೋರದಂತೆ ಸತ್ಯನಾರಾಯಣ ರೆಡ್ಡಿಗೆ ಪೊಲೀಸ್ ಠಾಣೆಗೆ ಕರೆಸಿಕೊಂಡು ಬುದ್ಧಿಮಾತು ಹೇಳಲಾಗಿತ್ತು. ಆದರೂ ಆತ ಮತ್ತದೇ ರೀತಿಯ ಸಮಸ್ಯೆ ಸೃಷ್ಟಿ ಮಾಡಿದ್ದಾನೆ ಎಂಬುದಾಗಿ ನೊಂದ ಮಹಿಳೆ ಹೇಳಿದ್ದು ಇದರಿಂದ ಬೇಸತ್ತ ಸಂತ್ರಸ್ತೆ ಮತ್ತು ಆಕೆಯ ಸಹೋದರ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.


