Friday, July 24, 2026
Homeರಾಜ್ಯಬೆಳಗಾವಿ : ಯುಗಾದಿಯಂದು ಬೆಳಗಾವಿಯಲ್ಲಿ ಮನೆಮಾಡಿ ಗೃಹ ಪ್ರವೇಶಿಸಿದ ಜಗದೀಶ್​ ಶೆಟ್ಟರ್.

ಬೆಳಗಾವಿ : ಯುಗಾದಿಯಂದು ಬೆಳಗಾವಿಯಲ್ಲಿ ಮನೆಮಾಡಿ ಗೃಹ ಪ್ರವೇಶಿಸಿದ ಜಗದೀಶ್​ ಶೆಟ್ಟರ್.

ಬೆಳಗಾವಿ ; ಇನ್ನೇನು ಲೋಕಸಭೆ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದೆ ಈ ನಡುವೆ ಕ್ಷೇತ್ರದ ಅಭ್ಯರ್ಥಿಗಳು ಇನ್ನಿಲದ ಕಸರತ್ತು ಮಾಡುತ್ತಿದ್ದು ಕಾಂಗ್ರೆಸ್‌ಗೆ ಶಾಕ್ ಕ್ಕೊಟ್ಟು ಬಿಜೆಪಿ ಸೇರಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಚುನಾವಣಾ ಹಿನ್ನೆಲೆ ಬೆಳಗಾವಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿ ಯುಗಾದಿ ಹಬ್ಬದಂದೇ ಗೃಹ ಪ್ರವೇಶ ನೆರವೇರಿಸಿದ್ದಾರೆ.

ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶೆಟ್ಟರ್ ಹೊರಗಿನವರು ಅವರು ಬೆಳಗಾವಿ ಯಾರ್ರಿರುವ ಮನೆಯ ವಿಳಾಸ ಹೇಳಲಿ ಎಂದು ಸವಾಲು ಹಾಕಿದ್ದ ಬೆನ್ನಲ್ಲೇ ಇದೀಗ ಮನೆ ಮಾಡುವ ಮೂಲಕ ತಿರುಗೇಟು ನೀಡಿದ್ದು,
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಿಪಕ್ಷದವರಿಗೆ ಉತ್ತರ ಕೊಡುವುದಕ್ಕೆ ಮನೆ ಮಾಡಿಲ್ಲ,ಯುಗಾದಿ ಹಿನ್ನೆಲೆ ಗೃಹ ಪ್ರವೇಶ ಮಾಡಿದ್ದೇನೆ ಈ ಹಿಂದೆ ಬೆಳಗಾವಿಯಲ್ಲಿ ನಾನು ಕಚೇರಿಯನ್ನೂ ತೆರೆಯುತ್ತೇನೆ,ಮನೆ ಮಾಡುವುದಾಗಿ ಹೇಳಿದ್ದೆ,ಅದರಂತೆಯೇ ಮನೆ ಕಚೇರಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮೋದಿ ಹವಾ ಜೋರಾಗಿದೆ,ದೇಶದ ವಿಚಾರಕ್ಕೆ ಜನರು ಮೋದಿಯನ್ನು ಬೆಂಬಲಿಸುವುದು ನಿಜ, ನಾನು ಯಾರ ಬಗ್ಗೆ ಟೀಕೆ ಮಾಡೋದಿಲ್ಲ. ಟೀಕಿಸಿದ್ರೆ ದೊಡ್ಡವರಾಗಬಹುದೆಂದು ಟೀಕಿಸ್ತಿರಬಹುದು. ಬೆಳಗಾವಿಯಲ್ಲಿ ನನಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗ್ತಿದೆ. ಎಲ್ಲ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ ಎಂದಿದ್ದಾರೆ.ಬಳಿಕ ಮಾತನಾಡಿದ ಅವ್ರು ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರಧಾರೆ ಮೇಲೆ ಚುನಾವಣಾ ಆಗುತ್ತೆ. ಇದು ಜಾತಿ ಧರ್ಮದ ಮೇಲೆ ನಡೆಯುವ ಚುನಾವಣೆ ಅಲ್ಲ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular