Friday, March 13, 2026
Flats for sale
Homeರಾಜ್ಯಬೆಂಗಳೂರು : ಬಿಜೆಪಿ ಮುಖಂಡನ ನಿರ್ಲಕ್ಷ್ಯ, ರ್‍ಯಾಲಿ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್‌...

ಬೆಂಗಳೂರು : ಬಿಜೆಪಿ ಮುಖಂಡನ ನಿರ್ಲಕ್ಷ್ಯ, ರ್‍ಯಾಲಿ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್‌ ಡಿಕ್ಕಿ ಸವಾರ ದಾರುಣ ಸಾವು.

ಬೆಂಗಳೂರು : ಬಿಜೆಪಿ ಮುಖಂಡನ ನಿರ್ಲಕ್ಷ್ಯದಿಂದ ಬೈಕ್ ಸವಾರ ದಾರುಣ ಮೃತಪಟ್ಟ ಘಟನೆ ಬೆಂಗಳೂರಿನ ಕೆ.ಆರ್ ಪುರಂ ಸಮೀಪದ‌ ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ನಡೆದಿದೆ.

ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಮುಖಂಡರೊಬ್ಬರು ಕಾರು ರಸ್ತೆಯಲ್ಲಿ ಪಾರ್ಕ್ ಮಾಡಿದ ಸಂದರ್ಭದಲ್ಲಿ ಹಿಂದೆ ಮುಂದೆ ನೋಡದೇ ಏಕಾಏಕಿ ಬಾಗಿಲು ತೆರೆದ ಪರಿಣಾಮ ಬೈಕ್​ಗೆ ತಾಗಿದ್ದು ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್​ ಕೆಳಗೆ ಬಿದ್ದಿದ್ದ ಪ್ರಕಾಶ್​ ಅವರ ಮೇಲೆ ಹರಿದಿದೆ. ಈ ಚುನಾವಣಾ ಪ್ರಚಾರದ ಬರದಲ್ಲಿ ಬಡಪಾಯಿ ಪ್ರಕಾಶ್ ಎಂಬುವವರು ಮೃತಪಟ್ಟಿದ್ದಾರೆ.

ಪ್ರಕಾಶ್‌, ಟಿಸಿ ಪಾಳ್ಯ ನಿವಾಸಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಪ್ರಕಾಶ್ ಅನ್ನು ಕೆಆರ್ ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಬೈಕ್ ಸವಾರ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular