Thursday, November 6, 2025
Flats for sale
Homeಜಿಲ್ಲೆಮಂಗಳೂರು : 40°C ಗರಿಷ್ಠ ತಾಪಮಾನದತ್ತ ಸಮೀಪಿಸಿದ ದಕ್ಷಿಣ ಕನ್ನಡ ಜಿಲ್ಲೆ.

ಮಂಗಳೂರು : 40°C ಗರಿಷ್ಠ ತಾಪಮಾನದತ್ತ ಸಮೀಪಿಸಿದ ದಕ್ಷಿಣ ಕನ್ನಡ ಜಿಲ್ಲೆ.

ಮಂಗಳೂರು : ಕರಾವಳಿ ಜಿಲ್ಲೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು 40°C ಆಸುಪಾಸು ಸಮೀಪಿಸಿದೆ. ಈಗೆಯೇ ಮುಂದುವರಿದರೆ ಮುಂದೊಂದು ದಿನ ಬಾರಿ ದೊಡ್ಡ ಅನಾಹುತ ಕಾಡುತ್ತದೆಂದು ತಜ್ಞರು ತಿಳಿಸಿದ್ದಾರೆ. ಜಿಲ್ಲೆಯ ನಿವಾಸಿಗಳು ಹೆಚ್ಚುತ್ತಿರುವ ತಾಪಮಾನದ ತೀವ್ರತೆಯನ್ನು ಅನುಭವಿಸುತ್ತಿದ್ದು ನಿರಂತರ ಶಾಖದ ಅಲೆಯಿಂದ ಉಲ್ಬಣಗೊಂಡಿದೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ ತಾಪಮಾನ 39.9 ಡಿಗ್ರಿ ಸೆಲ್ಸಿಯಸ್, ಉಡುಪಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಲುಪಿದೆ.

IMD ಯ ಅಂಕಿಅಂಶಗಳ ಪ್ರಕಾರ, ಕರಾವಳಿ ಪ್ರದೇಶದಲ್ಲಿ ಪ್ರಸ್ತುತ ತಾಪಮಾನವು ದಿನನಿತ್ಯ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಹೆಚ್ಚುತ್ತಿದೆ. ಸಾಮಾನ್ಯ ವ್ಯಾಪ್ತಿಯು 35 ರಿಂದ 36 ಡಿಗ್ರಿ ಸೆಲ್ಸಿಯಸ್ ನಡುವೆ ಏರುಪೇರಾಗುತ್ತಿದೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯನ್ನು ಮುನ್ಸೂಚನೆಗಳು ಸೂಚಿಸುತ್ತವೆ.

ಏಪ್ರಿಲ್ 10 ರ ನಂತರ ಕರಾವಳಿ ಭಾಗದಲ್ಲಿ ನಿರೀಕ್ಷಿತ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬಿಸಿಲಿನ ಹೊಡೆತದದಿಂದ ಅಪಾಯಗಳನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ನಿಯಮಿತವಾಗಿ ನೀರು,ಲಿಂಬೆ ಹಣ್ಣು ಜ್ಯೂಸು,ಕಲ್ಲಂಗಡಿ, ಸೌತೆಕಾಯಿ ಮತ್ತು ಅನಾನಸ್‌ನಂತಹ ಹಣ್ಣುಗಳನ್ನು ಸೇವಿಸಲು ಸೂಚಿಸಿದೆ.

ಹೊರಾಂಗಣದಲ್ಲಿ ಪ್ರಯಾಣಿಸುವಾಗ ಕ್ಯಾಪ್ಗಗಳನ್ನೂ ಹಾಕಲು ತಿಳಿಸಿದೆ

ಬೇಸಿಗೆಯಲ್ಲಿ ಅಸ್ವಸ್ಥತೆಯನ್ನು ನಿವಾರಿಸಲು ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಲು ತಿಳಿಸಿದೆ.

ಸುಡುವ ಸೂರ್ಯನ ಕೆಳಗೆ ಬರಿಗಾಲಿನಲ್ಲಿ ನಡೆಯುವುದನ್ನು ತಡೆಯಿರಿ; ಸೂಕ್ತವಾದ ಪಾದರಕ್ಷೆಗಳನ್ನು ಧರಿಸಲು ತಿಳಿಸಿದೆ.

ನಿರ್ಜಲೀಕರಣವನ್ನು ತಡೆಯಲು ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯುವ ಮೂಲಕ ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ತಿಳಿಸಿದೆ.

ಜ್ವರ, ಶೀತ, ತಲೆನೋವು, ಅಥವಾ ಆಯಾಸದಂತಹ ಲಕ್ಷಣಗಳು ಕಂಡುಬಂದರೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular