ಗಂಗಾವತಿ : ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದಿದ್ದಕ್ಕಾಗಿ ಮುನಿಸಿಕೊಂಡಿರುವ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಪಕ್ಷದ ಪ್ರಚಾರ ಸೇರಿದಂತೆ ಬಹುತೇಕ ಚಟುವಟಿಕೆಯಿಂದ ದೂರ ಉಳಿದಿದ್ದರು. ಇದೀಗ ಪಕ್ಷ ರಾಜ್ಯ ನಾಯಕರು ನೀಡಿದ ಭರವಸೆ ಮರೆಗೆ ಸಂಸದ ಕರಡಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಲು ಸಮ್ಮತಿ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಕರಡಿ ಸಂಗಣ್ಣ ತಟಸ್ಥರಾಗಿದ್ದ ಹಿನ್ನೆಲೆ ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ಬಿಜೆಪಿ ವಲಯದಲ್ಲಿ ಹಾಲಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರಿಗೆ ಪ್ರತಿಕೂಲವಾಗಿ ಪರಿಣಾಮಿಸಿತ್ತು. ಆದರೆ ಗಂಗಾವತಿ, ಕನಕಗಿರಿ ಸೇರಿದಂತೆ ವಿವಿಧ ಕ್ಷೇತ್ರದ ನಾಯಕರ ನಿರಂತರ ಯತ್ನ ಫಲವಾಗಿ ಇದೀಗ ಕರಡಿ ಸಂಗಣ್ಣ ತಮ್ಮ ವರಸೆ ಬದಲಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ರಾಘವೇಂದ್ರ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಿಂದ ಸೂಕ್ತ ರಾಜಕೀಯ ಸ್ಥಾನಮಾನ ನೀಡುವ ಭರವಸೆ ನೀಡಿದ ಹಿನ್ನೆಲೆ ಕರಡಿ ಮುನಿಸು ಶಮನವಾಗಿದೆ ಎನ್ನಲಾಗಿದೆ.
ವಿಜಯೇಂದ್ರರ ಬಳಿಕ ಮಾಜಿಮುಂಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೂ ಭೇಟಿಯಾದ ಕರಡಿ ಸಂಗಣ್ಣ ಟಿಕೆಟ್ ತಪ್ಪಿದ್ದಕ್ಕೆ ತಮ್ಮ ನೋವು ತೋಡಿಕೊಂಡರು ಎಂದು ಗೊತ್ತಾಗಿದೆ. ಇದಕ್ಕೆ ಪ್ರತಕ್ರಿಯೆ ನೀಡಿದ ಯಡಿಯೂರಪ್ಪ, ಪಕ್ಷ ಕೈಗೊಳ್ಳುವ ನಿಧರ್ಾರಕ್ಕೆ ಪಕ್ಷದ ಎಲ್ಲರೂ ಬದ್ಧರಿರಬೇಕು. ಕೇವಲ ನಿಮಗಷ್ಟೆ ಅಲ್ಲ, ಮಾಜಿ ಸಿಎಂ ಆಗಿ ನಮ್ಮಂಥವರಿಗೂ ಕೆಲ ಸಂದರ್ಭದಲ್ಲಿ ಪಕ್ಷದ ತೀಮರ್ಾನ ಸಮಸ್ಯೆಯಾಗುತ್ತವೆ. ಆದರೆ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕು. ಮುನಿಸಿ ಮರೆತು ನಿಮ್ಮ ನೇತೃತ್ವದಲ್ಲಿ ಪಕ್ಷದ ಅಭ್ಯಥರ್ಿ ಗೆಲುವಿಗೆ ಶ್ರಮಿಸಿ ಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಮುನಿಸು, ನೋವು ಮರೆತಿರುವ ಸಂಸದ ಕರಡಿ ಸಂಗಣ್ಣ, ಕುಷ್ಟಗಿಯಲ್ಲಿ ಸೋಮವಾರ ಬಿಜೆಪಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಕ್ಷದರ್ಶಿಗಳು ತಿಳಿಸಿದ್ದಾರೆ.