ಮಂಗಳೂರು : ಇತ್ತೀಚಿನ ದಿನಗಳಲ್ಲಿ ರಸ್ತೆ ಮದ್ಯೆ ನಮಾಜ್ ಮಾಡೋದು,ಇಫ್ತಾರ್ ಕೂಟ ಆಯೋಜನೆ ಮಾಡುವುದೆಲ್ಲಾ ಸಾಮಾನ್ಯವಾಗುತ್ತ ಬಂದಿದೆ. ಆದರೆ ಜನಸಾಮನ್ಯರು ದಿನನಿತ್ಯ ಚಲಿಸುವ ರಸ್ತೆಗಳನ್ನು ಬ್ಲಾಕ್ ಮಾಡಿ ಇನ್ನಿತ್ತರ ಚಟುವಟಿಕೆಗಳಿಗೆ ಬಳಸುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಗಮನ ಹರಿಸಿ ನಿಯಂತ್ರಣಮಾಡಿದರೆ ಕೆಲಸ ಬಿಟ್ಟು ಮನೆಗೆ ತೆರಳುವ ಅನೇಕ ಮಹಿಳೆ ಮಕ್ಕಳಿಗೆ ರಸ್ತೆ ಬ್ಲಾಕ್ ಮಾಡಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಸರಿಯಾದ ಸಮಯಕ್ಕೆ ಮನೆ ತಲುಪದೇ ಸಮಸ್ಯೆ ಉಂಟಾಗುತ್ತದೆಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಉಳ್ಳಾಲ ತಾಲೂಕಿನ ಮುಡಿಪು ಎಂಬಲ್ಲಿ ಸೌಹಾರ್ದ ಹೆಸರಿನಲ್ಲಿ ಒಂದು ಬದಿಯ ರಸ್ತೆಯನ್ನು ತಡೆದು ಇಫ್ತಾರ್ ಕೂಟ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.
ಮುಡಿಪು ಜಂಕ್ಷನ್ನಲ್ಲಿ ಆಟೋ ರಾಜಕನ್ಮಾರ್ ಸಂಘಟನೆಯಿಂದ ಇಫ್ತಾರ್ ಕೂಟ ನಡೆಸಲಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆಗಳಲ್ಲಿ ನಮಾಜ್ ಮಾಡುವುದು, ಇಫ್ತಾರ್ ಕೂಟ ಆಯೋಜನೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಉಳ್ಳಾಲ ತಾಲೂಕಿನ ರಿಕ್ಷಾ ಚಾಲಕರೆಲ್ಲರೂ ಒಟ್ಟಾಗಿ ಸೇರಿಕೊಂಡು ನಡೆಸಿದ್ದು ಈ ಇಫ್ತಾರ್ ಕೂಟದಲ್ಲಿ ರಿಕ್ಷಾ ಚಾಲಕರು, ವರ್ತಕರು, ಸ್ಥಳೀಯರು ಭಾಗವಹಿಸಿದ್ದರು .ಈ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಈ ಕಾರ್ಯಕ್ರಮದ ಪರ ವಿರೋಧ,ಪ್ರತಿರೋಧ ವ್ಯಕ್ತವಾಗಿದೆ.