Friday, March 6, 2026
Flats for sale
Homeಕ್ರೀಡೆಬೆಂಗಳೂರು : ಈ ಸಲ ಕಪ್ ನಮ್ದೆ ಎಂದು ಕೊನೆಗೂ ಐಪಿಎಲ್ ಗೆದ್ದ ಯುವತಿಯರು.

ಬೆಂಗಳೂರು : ಈ ಸಲ ಕಪ್ ನಮ್ದೆ ಎಂದು ಕೊನೆಗೂ ಐಪಿಎಲ್ ಗೆದ್ದ ಯುವತಿಯರು.

ಬೆಂಗಳೂರು : ಮಹಿಳಾ ಪ್ರಿಮಿಯರ್ ಲೀಗ್ (WPL 2024) ನಲ್ಲಿ ಆರ್ ಸಿಬಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಗಲ್ಲಿ ಗಲ್ಲಿಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ರಸ್ತೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿರುವ ಆರ್ ಸಿಬಿ ಅಭಿಮಾನಿಗಳು RCB ಪರ ಜಯ ಘೋಷಗಳನ್ನು ಕೂಗಿ ಕುಣಿದು ಕುಪ್ಪಳಿಸಿದರು. 16 ವರ್ಷಗಳ ಬಳಿಕ ಆರ್ ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ.

ಮಹಿಳಾ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡಿ 8 ವಿಕೆಟ್ ಗಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಟ್ರೋಫಿ ಗೆದ್ದುಕೊಂಡಿದೆ. ಅದ್ಭುತ ಗೆಲುವಿನಿಂದ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರೆ. ಮಹಿಳೆಯರ ತಂಡ ಗೆದ್ದಾಯ್ತು, ಈ ಬಾರಿ ಪುರುಷರ ತಂಡವೂ ಗೆಲ್ಲಲಿದೆ ಅನ್ನೋ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಶ್ರೇಯಾಂಕಾ ಪಾಟೀಲ್ ನೀಡಿದ ಈ ಸಲ ಕಪ್ ಗೆದ್ದಿದ್ದೇವೆ ಅನ್ನೋ ಹೇಳಿಕೆ ಅಭಿಮಾನಿಗಳ ಸಂಭ್ರಮವನ್ನು ಡಬಲ್ ಮಾಡಿದೆ.

ಫೈನಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ವಿಶೇಷ ಅಂದರೆ ಗರಿಷ್ಠ ರನ್ ಸಿಡಿಸಿದ ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಶ್ರೇಯಾಂಕ ಪಾಟೀಲ್ ಅದ್ಬುತ ಪ್ರದರ್ಶನ ಆರ್‌ಸಿಬಿ ತಂಡಕ್ಕೆ ಗೆಲುವಿನ ಹಿರಿಮೆ ತಂದುಕೊಟ್ಟಿದೆ. ಇದರ ಜೊತೆಗೆ ಕಪ್ ನಮ್ದೆ ಕನ್ನಡದ ಘೋಷಣೆಯನ್ನು ದೆಹಲಿಯಲ್ಲಿ ಮೊಳಗಿಸಿದ್ದಾರೆ. ಮಹಿಳೆಯರ ಐಪಿಎಲ್‌ನಲ್ಲಿ ಕಪ್ ನಮ್ದಾಗಿದೆ. ಇದೀಗ ಪುರುಷರ ಕಪ್ ನಮ್ಮದಾಗಬೇಕಿದೆ ಅನ್ನೋ ಕೂಗು ಅಭಿಮಾನಿಗಳು ಮೊಳಗಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular