Wednesday, November 5, 2025
Flats for sale
Homeರಾಜ್ಯದಾವಣಗೆರೆ : ರಂಜಾನ್ ಉಪವಾಸ ಅಂತ್ಯದ ಬಳಿಕ ಪಾನಿಪುರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥ.

ದಾವಣಗೆರೆ : ರಂಜಾನ್ ಉಪವಾಸ ಅಂತ್ಯದ ಬಳಿಕ ಪಾನಿಪುರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥ.

ದಾವಣಗೆರೆ : ಮೊನ್ನೆ ತಾನೇ ಸರಕಾರ ಗೋಬಿ ,ಬಾಂಬೆ ಮಿಠಾಯಿಗಳಿಗೆ ಬಳಸುವ ಕಲರ್ ಬ್ಯಾನ್ ಬ್ಯಾನ್ ಮಾಡಿದ್ದೂ ಇದೀಗ ಪಾನಿಪುರಿ ಸರದಿ ಕೂಡ ಇರಬಹುದೆಂದು ತಜ್ಞರು ತಿಳಿಸಿದ್ದಾರೆ.

ರಂಜಾನ್ ಹಬ್ಬದ ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿಹಲವು ಕಡೆ ಮಾರಾಟ ಮಾಡಲಾಗುತ್ತಿದ್ದ ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿ ಘಟನೆ ನಡೆದಿದೆ. ಇದರಿಂದ ಹಲವು ಮಕ್ಕಳಿಗೆ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.ಅಸ್ವಸ್ಥಗೊಂಡ 19 ಮಕ್ಕಳಲ್ಲಿ ಒಂದು ಮಗವಿನ ಸ್ಥಿತಿ ಚಿಂತಾಜನಕವಾಗಿದ್ದು ಬಾಪುಜಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದೆ.ಇನ್ನು ಹಲವರನ್ನು ಮಲೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್​ ಮಾಡಲಾಗಿದೆ.

ಮಲೆಬೆನ್ನೂರು ಪಟ್ಟಣದಲ್ಲಿ ಪಾನಿಪುರಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನಿ ಸೂಚನೆ ಹೊರಡಿಸಿದ್ದು ಘಟನಾ ಸ್ಥಳಕ್ಕೆ ಹರಿಹರ ತಹಶೀಲ್ದಾರ್​ ಗುರುಬಸಯ್ಯ, ಹರಿಹರ ಟಿಎಚ್ ಓ, ಮಲೆಬೆನ್ನೂರ ಪಟ್ಟಣದ ಮುಖ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ತಹಶೀಲ್ದಾರ್​ ಅವರು ಪಟ್ಟಣಕ್ಕೆ ಸರಬರಾಜು ಆಗ್ತಾ ಇದ್ದ ನೀರನ್ನು ಪರಿಶೀಲನೆಗೆಂದು ಕಳುಹಿಸಿದ್ದು,25ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಮನೆ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಪಟ್ಟಣದಲ್ಲಿ ಪಾನಿ ಪುರಿ ಇನ್ನಿತರ ಫಾಸ್ಟ್ ಫುಡ್ ಅಂಗಡಿಗಳ ಮೇಲೆ ನಿಗಾ ವಹಿಸಿದ್ದಾರೆ.

ಪಾನೀಪೂರಿ ತಿಂದ ಕೆಲ ಹೊತ್ತಿನಲ್ಲೇ ಮಕ್ಕಳಿಗೆ ವಾಂತಿಯಾಗಿದೆ ಬಳಿಕ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಿರುವ ಮಕ್ಕಳು. ತಕ್ಷಣವೇ ಪೋಷಕರು ಮಕ್ಕಳನ್ನ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular