ಮಂಗಳೂರು : ಕರಾವಳಿ ಭಾಗದಲ್ಲಿ ದೈವ ದೇವರುಗಳ ಕಾರ್ಣಿಕ ಹೆಚ್ಚಾಗಿದ್ದು ವರ್ಷಾವಧಿ ಜಾತ್ರೆ ಕೋಲಾ ಎಲ್ಲ ಜನವರಿ ತಿಂಗಳಿಂದ ಮೇ ವರೆಗೆ ನಡೆಯುತ್ತಾ ಇರುತ್ತೆ. ಸಾಮನ್ಯವಾಗಿ ರಾಜಕಾರಣಿಗಳು ಹೆಚ್ಚಾಗಿ ಎಲ್ಲಾ ಕಡೆ ನಡೆಯುವ ದೈವದ ಕೋಲಾಗಳಲ್ಲಿ ದೈವ ದೇವರುಗಳ ಆಶೀರ್ವಾದ ಪಡೆಯುವುದು ಸರ್ವೇ ಸಾಮಾನ್ಯ ಆದರೆ ದೈವ ಭಕ್ತ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಒಂದು ವಾರದ ಹಿಂದೆ ನಡೆದಿದ್ದ ವಯನಾಟ್ ಕುಲವನ್ ದೈವ ಹೆಚ್ಚರಿಕೆ ನೀಡಿತ್ತು ಏನೆಂದರೆ “ನಿನಗೆ ವೈರಿಗಳು ತುಂಬಾನೇ ಇದ್ದಾರೆ. ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ಯಾವುದಕ್ಕೂ ಕುಗ್ಗಬೇಡ. ನೀನು ಹಿಂದುರುಗಿ ನೋಡಬೇಡ, ನಿನಗೆ ಮುಂದೊಂದು ದಿನ ಜಯವಿದೆ” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಒಂದು ವಾರದ ಹಿಂದೆ ನಡೆದಿದ್ದ ವಯನಾಟ್ ಕುಲವನ್ ದೈವದ ನೇಮೋತ್ಸವದಲ್ಲಿ ವಿಷ್ಣುಮೂರ್ತಿ ದೈವ ಎಚ್ಚರಿಕೆ ನೀಡಿತ್ತು.
ಮಲಯಾಳಂ ಭಾಷೆಯಲ್ಲಿ ನುಡಿ ಹೇಳುವ ಕೇಳಲು ಅರ್ಥಪೂರ್ಣವಾಗಿದೆ. ವಯನಾಡು ಕುಲದೇವರಾದ ವಿಷ್ಣುಮೂರ್ತಿ ದೈವ ಹೀಗೆ ಹೇಳಿದೆ – “ಎಲ್ಲರಿಗೂ ವೈರಿಗಳಿದ್ದರು. ಅಣ್ಣ ತಮ್ಮಂದಿರೂ ವೈರಿಗಳಾಗಿದ್ದದ್ದುಂಟು. ಕುಂತಿಯದ್ದೂ, ಧೃತರಾಷ್ಟ್ರ, ಪಾಂಡುವಿನ ಮಕ್ಕಳು ಅಣ್ಣ ತಮ್ಮಂದಿರು. ಅಣ್ಣ ತಮ್ಮಂದಿರೂ ವೈರಿಗಳಾಗಿ ಬದಲಾದರು. ಅದರಲ್ಲಿ ಪಾರ್ಥ ಸರಿಯಾದ ಮಾರ್ಗದಲ್ಲಿ ಸಾಗಿದ. ಕುರುಕ್ಷೇತ್ರವಾಯಿತು. ಸತ್ಯ ಮಾತ್ರ ಗೆಲ್ಲುತ್ತದೆ. ಅಸತ್ಯ ಗೆಲ್ಲುವುದಿಲ್ಲ. ಧರ್ಮ ಗೆಲ್ಲುತ್ತದೆ. ಅಧರ್ಮ ಗೆಲ್ಲುವುದಿಲ್ಲ. ಎಂದು ಎಚ್ಚರಿಕೆ ನೀಡಿತ್ತು.
ನಿಮಗೆ ನನ್ನ ಆಶೀರ್ವಾದ ಯಾವಾಗಲು ಇದೆ ಸತ್ಯದ ಮಾರ್ಗದಲ್ಲಿ ಸಾಗಿ. ಕೃಷ್ಣನು ಪಾರ್ಥನಲ್ಲಿ ಹೇಳಿದಂತೆ ಕುರುಕ್ಷೇತ್ರ ಭೂಮಿಯಲ್ಲಿ ಕೃಷ್ಣನೇ ಸಾರಥಿಯಾಗಿ ನೇರವಾದ ಮಾರ್ಗದಲ್ಲಿ ಕೊಂಡೊಯ್ದಂತೆ ನಾನು ನಿನ್ನನ್ನು ಕೊಂಡೊಯ್ಯುವೆ” ಎಂದು ವಿಷ್ಣುಮೂರ್ತಿ ದೈವ ಕಟೀಲ್ಗೆ ಅಭಯ ನೀಡಿದೆ. ದೈವ ದೇವರುಗಳ ಮಾತಿನಲ್ಲಿ ಅಭಯ ನೀಡುವಾಗ ಸ್ಪಷ್ಟತೆ ಯಾವಾಗಲೂ ಇರುವುದು ಕರಾವಳಿ ಭಾಗದ ಜನರ ನಂಬಿಕೆ.


