Sunday, March 15, 2026
Flats for sale
Homeಜಿಲ್ಲೆಬಂಟ್ವಾಳ: ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದ್ದಕ್ಕೆ ಪೊಲೀಸ್ ವಾಹನಕ್ಕೇ ಬೆಂಕಿ ಹಚ್ಚಲು ಯತ್ನಿಸಿದ ಆಟೋ...

ಬಂಟ್ವಾಳ: ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದ್ದಕ್ಕೆ ಪೊಲೀಸ್ ವಾಹನಕ್ಕೇ ಬೆಂಕಿ ಹಚ್ಚಲು ಯತ್ನಿಸಿದ ಆಟೋ ಚಾಲಕ.

ಬಂಟ್ವಾಳ : ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಪೊಲೀಸ್ ವಾಹನಕ್ಕೇ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್​ನಲ್ಲಿ ನಡೆದಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಸಮವಸ್ತ್ರ ಧರಿಸದೆ ಮೊಬೈಲ್​ನಲ್ಲಿ ಮಾತಾಡುತ್ತ ಆಟೋ ಚಲಾಯಿಸುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪಿಎಸ್​ಐ ಸುತೇಶ್ ಮತ್ತು ಸಿಬ್ಬಂದಿ ಆಟೋ ತಡೆದಿದ್ದಾರೆ. ಅಲ್ಲದೆ, 2,000 ರೂಪಾಯಿ ದಂಡ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ಗೂಡಿನ ಬಳಿ‌ ನಿವಾಸಿ ಆಟೋ ಚಾಲಕ ಮೊಹಮ್ಮದ್ ಅನ್ಸಾರ್, ಸಾರ್ವಜನಿಕವಾಗಿ ರಂಪಾಟ ನಡೆಸಿದ್ದಾನೆ.

ಆಟೋ ಹಾಗೂ ಪೊಲೀಸ್ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಘಟನೆ ದೃಶ್ಯ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದ್ದು ಪ್ರಕರಣ ಸಂಬಂಧ ಅನ್ಸಾರ್ ವಿರುದ್ಧ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular