Thursday, July 23, 2026
Homeರಾಜ್ಯರಿಪ್ಪನ್ ಪೇಟೆ : ಎಂಟು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ,ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ.

ರಿಪ್ಪನ್ ಪೇಟೆ : ಎಂಟು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ,ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ.

ರಿಪ್ಪನ್ ಪೇಟೆ : ಎಂಟು ವರ್ಷದ ಮಗುವಿನ ಮೇಲೆ 52 ವರ್ಷದ ವ್ಯಕ್ತಿಯೊಬ್ಬನು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ .

ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚಂದ್ರಪ್ಪ (52) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರನಾಗಿದ್ದಾನೆ.

ಭಾನುವಾರ ಸಂಜೆ ಸಮಯದಲ್ಲಿ ಆರೋಪಿ ಚಂದ್ರಪ್ಪ ನಿಗೆ ಸೇರಿದ ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು ಬಂದ ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರದಲ್ಲಿ ಈ ವಿಷಯ ಯಾರಿಗೂ ತಿಳಿಸದಂತೆ 10 ರೂ ಹಣ ನೀಡಿ ನಾಳೆ ಬಾ ಮತ್ತಷ್ಟು ಚಾಕೊಲೇಟ್ ಕೊಡುತ್ತೇನೆ ಎಂದಿದ್ದಾನೆ. ಆ ನಂತರದಲ್ಲಿ ಬಾಲಕಿ ಅಳುತ್ತಾ ಮನೆಗೆ ಹೋಗಿ ಪೋಷಕರಿಗೆ ವಿಷಯವನ್ನು ತಿಳಿಸಿದ್ದಾಳೆ.ತಕ್ಷಣ ಬಾಲಕಿಯ ಪೋಷಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಚಂದ್ರಪ್ಪ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular