ಬಂಟ್ವಾಳ ; ಯುವತಿಯೊರ್ವಳು ಬೆಂಗಳೂರಿಗೆ ಸ್ಲಿಪರ್ ಬಸ್ಸ್ ನಲ್ಲಿ ಅನ್ಯಕೋಮಿನ ಯುವತಿಜೊತೆ ಪ್ರಯಾಣಿಸುತ್ತಿದ್ದ ಕಾರಣ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಬಂಟ್ವಾಲ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.
ಪ್ರಯಾಣಿಕರು ಮಂಗಳೂರಿನ ನೀಧಿ .ಆರ್ .ಶೆಟ್ಟಿ ಹಾಗೂ ಭಟ್ಕಳ ದ ಮೊಹಮ್ಮದ್ ರಾಯಿಫ್ ಎಂದು ತಿಳಿಯಲಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ಜೋಡಿಗಳ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಬಸ್ಸನ್ನು ತಡೆದು ನಿಲ್ಲಿಸಿದ ಕಾರಣ ಪರಿಸ್ಥಿತಿ ಉದ್ವಿಗ್ನ ಕೊಂಡಿತ್ತು.ಅ ಬಳಿಕ ಬಜರಂದದಳದ ಕಾರ್ಯಕರ್ತ ಹಾಗೂ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿದೆ.
ಸ್ಥಳಕ್ಕೆ ದಾವಿಸಿದ ಪೋಲಿಸರು ಕಾರಕರ್ತರು ಹಾಗೂ ಇವರಿಬ್ಬರು ಠಾಣೆಗೆ ತೆರಳಿದ್ದಾರೆ.ಯುವತಿಯ ಮನೆಯವರಿಗೆ ಮಾಹಿತಿ ನೀಡಿದ ಪೋಲಿಸರು ಯುವತಿಯ ಮನೆಯವರ ಜೊತೆ ಕಳುಹಿಸಲಾಗಿದೆ ಎಂಬ ಮಾಹಿತಿ ಇದೆ.