Friday, November 22, 2024
Flats for sale
Homeರಾಜ್ಯತುಮಕೂರು : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಗ, ಸೊಸೆ !

ತುಮಕೂರು : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಗ, ಸೊಸೆ !

ತುಮಕೂರು : ಮಕ್ಕಳಿಗಾಗಿ ಹಗಲಿರುಳು ದುಡಿದು ಜೀವನವನ್ನೇ ತ್ಯಾಗಮಾಡಿದ ತಾಯಿಯೇ ದೇವರು ಎನುತ್ತಾರೆ ಆದರೆ ಇಲ್ಲಿ ಮಗ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಆಸ್ತಿಗಾಗಿ ತನ್ನ ತಾಯಿಯನ್ನೇ ಮನೆಯ ಕೊಠಡಿಯಲ್ಲಿ ಕಳೆದ 11 ತಿಂಗಳಿನಿಂದ ಕೂಡಿ ಹಾಕಿದ ಅಮಾನವೀಯ ಘಟನೆ ತುಮಕೂರು ನಗರದ ಶಿರಾ ಗೇಟ್​ನ ಸಾಡೆಪುರದಲ್ಲಿ ನಡೆದಿದೆ. ಸಿಡಿಪಿಒ ಆಗಿ ನಿವೃತ್ತರಾಗಿದ್ದ ಪಂಕಜಾಕ್ಷಿ (80) ಮಗನಿಂದ ದಿಗ್ಬಂಧನಕ್ಕೊಳಗಾದ ಸಂತ್ರಸ್ತ ತಾಯಿ.

ಆಸ್ತಿಗಾಗಿ ವೃದ್ಧ ತಾಯಿಯನ್ನು ಕಳೆದ 11 ತಿಂಗಳಿನಿಂದ ಮಗ-ಸೊಸೆ ಬಂಧನದಲ್ಲಿಟ್ಟಿದ್ದರು.ಸಿಡಿಪಿಒ ಆಗಿ ನಿವೃತ್ತರಾಗಿರುವ ತುಮಕೂರು ನಗರದ ಶಿರಾ ಗೇಟ್​​​​​ನ ಸಾಡೆಪುರದ ನಿವಾಸಿಯಾಗಿರುವ ಪಂಕಜಾಕ್ಷಿ ಅವರಿಗೆ 50 ಸಾವಿರ ರೂ. ನಿವೃತ್ತಿ ವೇತನ ಬರುತ್ತಿತ್ತು ಇದರ ಜೊತೆ 12 ಮನೆಗಳು ಸೇರಿದಂತೆ ಒಟ್ಟು ಆಸ್ತಿಗೆ ಹಕ್ಕುದಾರಾಗಿದ್ದಾರೆ. ಈಗಾಗಲೇ ಮಕ್ಕಳು ವೃದ್ಧೆಯ ಬಳಿ ಇದ್ದ ಎಲ್ಲ ಒಡವೆಗಳನ್ನೆಲ್ಲ ಪಡೆದುಕೊಂಡಿದ್ದಾರೆ. ಮಗ ಜೇಮ್ ಸುರೇಶ್ ಹಾಗೂ ಈತನ ಪತ್ನಿ ಆಶಾ, ಪಂಕಜಾಕ್ಷಿ ಅವರಿಗೆ ಹಿಂಸೆ, ಕಿರುಕುಳ ನೀಡುತ್ತಿದ್ದು ಅಲ್ಲದೆ, ಕಳೆದ 11 ತಿಂಗಳಿನಿಂದ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.

ಮಗ ಜೇಮ್ ಸುರೇಶ್ ಹಾಗೂ ಸೊಸೆ ಆಶಾ ಮನೆಗಳನ್ನು ಮಕ್ಕಳ ಹೆಸರಿಗೆ ಮಾಡಿಕೊಡಲು ಕಿರುಕುಳ ನೀಡುತ್ತಿರುವ ವಿಚಾರ ಸ್ಥಳೀಯ ನಿವಾಸಿಗಳಿಗೆ ತಿಳಿದಿದೆ. ಈ ವಿಚಾರದ ಬಗ್ಗೆ ಸ್ಥಳೀಯರು ಸಾಂತ್ವಾನ ಕೇಂದ್ರ ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.ಅದರಂತೆ ವನಜಾಕ್ಷಿ ನಿವಾಸಕ್ಕೆ ಆಗಮಿಸಿದ ತುಮಕೂರು ‌ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ವನಜಾಕ್ಷಿ ಅವರನ್ನು ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ಕರೆದುದೊಯ್ದಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ಕೊಡಿಸಿದ್ದಾರೆ. ಮಾಹಿತಿ ನೀಡಿದರು ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೀಗಿರುವ ಅಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸರಿಗೆ ದೂರು ನೀಡಿದ್ದಾರೆ. ವೃದ್ಧ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದು . ನ್ಯಾಯಾಧೀಶರ ಮುಂದೆ ನಾಲ್ವರು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ. ಸದ್ಯ ನ್ಯಾಯಾಧೀಶರ ಮಧ್ಯಪ್ರವೇಶದಿಂದ ಪ್ರಕರಣವು ಇತ್ಯರ್ಥವಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯಾಗಿಸಿ ಎಂಬುದು ಸ್ಥಳೀಯರ ಮಾತು.

RELATED ARTICLES

LEAVE A REPLY

Please enter your comment!
Please enter your name here

Most Popular