ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ವಿಷಕಾರಿಕ ಜಂತುಗಳು ಬಿದ್ದು ಅಸ್ವಸ್ಥರಾದ ಘಟನೆ ಹಲವು ಬಾರಿ ವರದಿಯಾಗಿದೆ. ಆದರೆ ಇದೊಂದು ಆಘಾತಕಾರಿ ವಿಚಾರ ಎಂದು ಹೇಳಬಹುದು ಯಾಕೆಂದರೆ ಸರಕಾರಿ ಹಾಸ್ಟೆಲ್,ಪಿಜಿ ಗಳಲ್ಲಿ ಎಲ್ಲಾ ಇಂತಹ ವರದಿ ಸಹಜ ಆದರೆ ವಾಯುಯಾನದ ಸಂಸ್ಥೆ ಇಂಡಿಗೋ ವಿಮಾನದಲ್ಲಿ ನೀಡಿದ ಸ್ಯಾಂಡ್‌ವಿಚ್‌ನಲ್ಲಿ ಸ್ಕ್ರೂ ಪತ್ತೆಯಾಗಿದೆ ಎಂದು ಪ್ರಯಾಣಿಕರೊಬ್ಬರುಕೊಂಡಿದ್ದು ಆಶ್ಚರ್ಯಕಾರಿ ಸಂಗತಿಯಾಗಿದೆ.
ಈ ಬಗ್ಗೆಅವರು ಪ್ರಯಾಣದ ಸಮಯದಲ್ಲಿ ಈ ಸಮಸ್ಯೆಯನ್ನು ತಮಗೆ ವರದಿ ಮಾಡಿಲ್ಲ ಎಂದು ವಿಮಾನಯಾನ ಸಂಸ್ಥೆ ಮಂಗಳವಾರ ಹೇಳಿದೆ. ಪ್ರಯಾಣಿಕನು ವಿಮಾನದಿಂದ ಇಳಿದ ನಂತರ ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ಯಾಂಡ್‌ವಿಚ್‌ನ ಚಿತ್ರದೊಂದಿಗೆ ಹಂಚಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಬೆಂಗಳೂರು-ಚೆನ್ನೈ ನಡುವಿನ 6E-904 ವಿಮಾನದಲ್ಲಿ ಫೆಬ್ರವರಿ 1, 2024 ರಂದು ಈ ಘಟನೆ ನಡೆದಿದೆ ಆದರೆ ವಿಮಾನದ ಗ್ರಾಹಕರ ತನ್ನ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದರಿಂದ ನಮಗೆ ಈ ವಿಚಾರ ತಿಳಿದಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನದಲ್ಲಿ ಪ್ರತಿಷ್ಠಿತ ಕ್ಯಾಟರರ್‌ಗಳಿಂದ ಗುಣಮಟ್ಟ ಮತ್ತು ನೈರ್ಮಲ್ಯದಿಂದ ಕೂಡಿದ ಉನ್ನತ ಗುಣಮಟ್ಟದ ಊಟವನ್ನು ಪೂರೈಸುತಿದ್ದು,ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುವುದಾಗಿ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.