ಪಾಟ್ನಾ : ಆಯುಷ್ಯವಿದ್ದರೆ ಹೇಗೋ ಬದುಕಬಹುದು ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಛತ್ತೀಸ್‌ಗಢದ ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಫೆಬ್ರವರಿ 11 ರಂದು ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದರು. ನಂತರ ಅಂತ್ಯಸಂಸ್ಕಾರಕ್ಕಾಗಿ ಆಕೆಯ ಇಬ್ಬರು ಮಕ್ಕಳು ಊರಿಗೆ ಕರೆತರಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಆದರೆ ಪವಾಡವೆಂಬಂತೆ ತಾಯ್ನಾಡು ಪ್ರವೇಶಿಸುತ್ತಿದ್ದಂತೆ ಮಹಿಳೆ ಉಸಿರಾಡುತ್ತಿದುದ್ದನ್ನು ಕಂಡು ಕುಟುಂಬಸ್ಥರು ಭಯಗೊಂಡಿದ್ದಾರೆ.
ಮಹಿಳೆಯನ್ನು ರಾಮವತಿ ದೇವಿ ಎಂದು ಗುರುತಿಸಲಾಗಿದ್ದು, ಬೇಗುಸರಾಯ್‌ನ ನೀಮಾ ಚಂದ್‌ಪುರ ಗ್ರಾಮದವರು. ಆಕೆ ತನ್ನ ಇಬ್ಬರು ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ಜೊತೆ ಛತ್ತೀಸ್‌ಗಢಕ್ಕೆ ಹೋಗಿದ್ದಳು.
ಫೆಬ್ರವರಿ 11 ರಂದು ಮಹಿಳೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಮತ್ತು ಛತ್ತೀಸ್‌ಗಢದ ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದಾರೆ.
ಆಕೆಯ ಪುತ್ರರು ಆಕೆಯ ಸ್ಥಳೀಯ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದರು ಮತ್ತು ಫೆಬ್ರವರಿ 12 ರಂದು ಖಾಸಗಿ ವಾಹನದಲ್ಲಿ ಮೃತ ದೇಹವನ್ನು ಬೇಗುಸರೈಗೆ ತರುತ್ತಿದ್ದರು. ಅವರು 18 ಗಂಟೆಗಳ ಪ್ರಯಾಣದ ನಂತರ ಬಿಹಾರದ ಔರಂಗಾಬಾದ್ ತಲುಪಿದಾಗ, ಇದ್ದಕ್ಕಿದ್ದಂತೆ ರಾಮಾವತಿಗೆ ಪ್ರಜ್ಞೆ ಬಂದಿದೆ.
ಆರಂಭದಲ್ಲಿ ಕುಟುಂಬಸ್ಥರು ಭಯಗೊಂಡಿದ್ದು. ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿ ಆಕೆಯನ್ನು ಪರೀಕ್ಷಿಸಲು ಧೈರ್ಯ ತುಂಬಿದ್ದಾರೆ. ಆಕೆ ಜೀವಂತವಾಗಿರುವುದನ್ನು ಕಂಡುಕೊಂಡ ನಂತರ, ಅವರು ಬೇಗುಸರಾಯ್ ಸದರ್ ಆಸ್ಪತ್ರೆಗೆ ಧಾವಿಸಿದ್ದು ಅಲ್ಲಿ ವೈದ್ಯರು ಅವರಿಗೆ ವೆಂಟಿಲೇಟರ್ ಅಳವಡಿಸಿದ್ದಾರೆ.
ಆಕೆಯನ್ನು ರಸ್ತೆಯ ಮೂಲಕ ಕರೆತರುತ್ತಿದ್ದಾಗ ಸುಮಾರು 18 ಗಂಟೆಗಳ ವಾಹನ ಪ್ರಯಾಣದ ವೇಳೆ ವಾಹನ ಬ್ರೇಕ್ ಹಾಕಿದ ಪರಿಣಾಮ, ಸಿಪಿಆರ್ ರೀತಿಯಲ್ಲಿ ಮತ್ತೆ ಉಸಿರಾಡಲು ಪ್ರಾರಂಭವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಕೆಯನ್ನು ಐಸಿಯುಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
CPR ಎನ್ನುವುದು ಜೀವ ಉಳಿಸುವ ತಂತ್ರವಾಗಿದ್ದು, ಇದು ಯಾರೊಬ್ಬರ ಉಸಿರಾಟ ಅಥವಾ ಹೃದಯ ಬಡಿತವನ್ನು ನಿಲ್ಲಿಸಿರುವ ಅನೇಕ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿದೆ