Thursday, November 6, 2025
Flats for sale
Homeರಾಜ್ಯಮಡಿಕೇರಿ : ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಸಾವಿಗೆ ನಾನೇ ಕಾರಣ ಎಂದು ಮನನೊಂದ ವ್ಯಕ್ತಿ...

ಮಡಿಕೇರಿ : ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಸಾವಿಗೆ ನಾನೇ ಕಾರಣ ಎಂದು ಮನನೊಂದ ವ್ಯಕ್ತಿ ಆತ್ಮಹತ್ಯೆ.

ಮಡಿಕೇರಿ : ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ತನ್ನ ತಪ್ಪಿನಿಂದ ವಿದ್ಯಾರ್ಥಿ ಮೃತಪಟ್ಟಿದ್ದನೆಂದು ಮನನೊಂದು ದ್ವಿಚಕ್ರ ಸವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಮಡಿಕೇರಿ ಚೈನ್ ಗೇಟ್ ಬಳಿ ಶುಕ್ರವಾರ ಅಪಘಾತ ನಡೆದಿದ್ದು ,ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿ ಧನಲ್ ಸುಬ್ಬಯ್ಯ (24)ಹಾಗೂ ಹೆಚ್ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡಿದಿದೆ , ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧನಲ್ ಸುಬ್ಬಯ್ಯ ಘಟನೆ ನಡೆದ ಮರುದಿನ ಮುಂಜಾನೆ ಸುಮಾರು 3 ಗಂಟೆಗೆ ಸಾವನ್ನಪ್ಪಿದ್ದಾನೆ.ಇದರಿಂದ ತಮ್ಮಯ್ಯ(57) ಕಾಕತಾಳೀಯವೆಂಬಂತೆ ಅದೇ ಸಮಯದಲ್ಲಿ ಅಪಘಾತಕ್ಕೆ ನಾನೇ ಕಾರಣ ಎಂದು ಮನನೊಂದು ನೇಣಿಗೆ ಶರಣಾಗಿದ್ದಾರೆ.

ಧನಲ್ ಸುಬ್ಬಯ್ಯ ಹಾಲೇರಿಯ ಕಾಂಡನಕೊಲ್ಲಿ ನಿವಾಸಿಯಾಗಿದ್ದು ,ಹೆಚ್.ಡಿ.ತಮ್ಮಯ್ಯ ಹೆರವನಾಡಿನ ನಿವಾಸಿಯಾಗಿದ್ದಾರೆ.ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular