Wednesday, November 5, 2025
Flats for sale
Homeರಾಜ್ಯಚಾಮರಾಜನಗರ : ಇಬ್ಬರು ಕುರಿಗಾಹಿಗಳಿಗೆ ಹುಲಿ ದಾಳಿ,ಗಂಭೀರ ಗಾಯ,ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು .

ಚಾಮರಾಜನಗರ : ಇಬ್ಬರು ಕುರಿಗಾಹಿಗಳಿಗೆ ಹುಲಿ ದಾಳಿ,ಗಂಭೀರ ಗಾಯ,ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು .

ಚಾಮರಾಜನಗರ : ಕಾಡು ಪ್ರಾಣಿಗಳ ಹಾವಳಿ ದಿನದಿಂದ ಹೆಚ್ಚಾಗುತ್ತಿದ್ದು ಹುಲಿ ಚಿರತೆ ದಾಳಿಯಿಂದ ಜನಸಾಮನ್ಯರು ಭಯಭೀತರಾಗಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ನ ಅರಣ್ಯದಂಚಿನಲ್ಲಿರುವ ಶಿವಪುರ ಹೊರವಲಯದಲ್ಲಿ ಹುಲಿ ದಾಳಿಗೆ ಇಬ್ಬರು ಕುರಿಗಾಹಿಗಳಿಗೆ ಗಾಯವಾಗಿರುವಂತಹ ಘಟನೆ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿಯಲ್ಲಿ ಇತ್ತೀಚೆಗೆ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಕಲ್ಲಹಳ್ಳಿ-ಸಂಪಿಗೆಪುರ ಮಾರ್ಗದಲ್ಲಿ ಹುಲಿ ಸಂಚರಿಸುವ ದೃಶ್ಯ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿತ್ತು ತದನಂತರ ಈ ಘಟನೆ ನಡೆದಿದೆ.

ಗಾಯಗೊಂಡವರನ್ನು ಶಿವಶೆಟ್ಟಿ(55), ಜವರಯ್ಯ(65) ಎಂದು ತಿಳಿಯಲಾಗಿದೆ . ಮೊದಲಿಗೆ ಕುರಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಕುರಿಯನ್ನು ರಕ್ಷಿಸಲು ಕುರಿಗಾಹಿಗಳು ಯತ್ನಿಸಿದಾಗ ಕುರಿಗಾಹಿಗಳ ಮೇಲೆ ದಾಳಿ ಮಾಡಿದೆ. ಗಾಯಾಳುಗಳಿಗೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪದೇ ಪದೆ ಹುಲಿ ಕಾಣಿಸಿರುವ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.

ಚಾಮರಾಜನಗರ ಅರಣ್ಯ ಪ್ರದೇಶಕ್ಕೆ ಸಮೀಪ ಇರುವುದರಿಂದ ಕಾಡುಪ್ರಾಣಿಗಳು ನಾಡಿಗೆ ಆಹಾರವನ್ನು ಬಯಸುತ್ತ ಬರುತ್ತವೆ ಇದರಿಂದ ಪದೇ ಪದೆ ಹುಲಿ ಕಾಣಿಸಿರುವ ಕಾರಣ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular