Wednesday, November 5, 2025
Flats for sale
Homeಜಿಲ್ಲೆಬೆಳ್ತಂಗಡಿ : ವಿದ್ಯಾರ್ಥಿ ಬಗ್ಗೆ ಮೆಸೇಜ್ ಮಾಡಿ ಅವಮಾನ ಮಾಡಿದ ಶಿಕ್ಷಕ,ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ...

ಬೆಳ್ತಂಗಡಿ : ವಿದ್ಯಾರ್ಥಿ ಬಗ್ಗೆ ಮೆಸೇಜ್ ಮಾಡಿ ಅವಮಾನ ಮಾಡಿದ ಶಿಕ್ಷಕ,ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ.

ಬೆಳ್ತಂಗಡಿ : ಡ್ರಾಯಿಂಗ್ ಶಿಕ್ಷಕ ವಿದ್ಯಾರ್ಥಿನಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಇನ್ನೊಂದು ವಿದ್ಯಾರ್ಥಿನಿಗೆ ಮಾಡಿದ ಮೆಸೇಜ್ ನಿಂದ ಅವಮಾನಗೊಂಡ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಫೆ.12ರಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ.

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಧರ್ಮಸ್ಥಳದ ನಿವಾಸಿ 16 ವರ್ಷದ ಮೃತ ವಿದ್ಯಾರ್ಥಿನಿಯಾಗಿದ್ದಾಳೆ.

ಶಾಲೆಯ ಡ್ರಾಯಿಂಗ್ ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತಪಟ್ಟ ವಿದ್ಯಾರ್ಥಿನಿಯ ಬಗ್ಗೆ ಇನ್ನೊಂದು ವಿದ್ಯಾರ್ಥಿನಿಗೆ ಅವಮಾನ ರೀತಿಯಲ್ಲಿ ಮೆಸೇಜ್ ಮಾಡಿದ್ದ. ಈ ಬಗ್ಗೆ ವಿದ್ಯಾರ್ಥಿನಿ ವಿಷಯ ಆಕೆಗೆ ತಿಳಿಸಿದ್ದಳು. ಇದನ್ನು ಮನೆಯವರಿಗೆ ತಿಳಿಸಿ ಶಾಲೆಗೆ ತಾಯಿ ಜೊತೆ ಹೋಗಿ ವಿಚಾರಿಸಿದ್ದಾಳೆ. ಬಳಿಕ ಫೆ.7ರಂದು ವಿದ್ಯಾರ್ಥಿನಿ ಶಾಲೆಗೆ ಬರುವಾಗ ಬಿಸ್ಕೆಟ್ ಪ್ಯಾಕೆಟ್ ಜೊತೆ ಇಲಿ ಪಾಷಣ ಪೆಸ್ಟ್ ಅಂಗಡಿಯಿಂದ ಖರೀದಿ ಮಾಡಿ ತಂದಿದ್ದಾಳೆ. ಬಳಿಕ ಶಾಲೆಯಲ್ಲಿ ಬಿಸ್ಕೆಟ್ ಜೊತೆ ಪೆಸ್ಟ್ ಮಿಕ್ಸ್ ಮಾಡಿ ಸೇವಿಸಿದ್ದಳು ಆಕೆಯನ್ನು ತಕ್ಷಣ ಶಾಲೆಯ ಶಿಕ್ಷಕರು ಸೇರಿ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ವಿದ್ಯಾರ್ಥಿನಿ ಲಿವರ್ ಮತ್ತು ಕಿಡ್ನಿ ನಿಷ್ಕ್ರಿಯವಾಗಿ ಫೆ.12 ರಂದು ಮುಂಜಾನೆ 5:30 ರ ಸುಮಾರಿಗೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ IPC 354D,509,POSO Act 12 ,75JJ Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಡ್ರಾಯಿಂಗ್ ಶಿಕ್ಷಕ ಆರೋಪಿ ರೂಪೇಶ್ ಪೂಜಾರಿಯನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಧರ್ಮಸ್ಥಳ ಪೊಲೀಸರು ಹಾಜರುಪಡಿಸಿದ್ದು ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಆರೋಪಿ ಶಿಕ್ಷಕ ರೂಪೇಶ್ ಪೂಜಾರಿಗೆ ಶಾಲೆಯ ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular