ಮಂಗಳೂರು : ಹಿಂದುಗಳಿಗೆ ಅಸ್ತಿತ್ವ ಇಲ್ಲ. ಭಾರತದಲ್ಲಿ ಮಾತ್ರ ಹಿಂದುಗಳಿದ್ದಾರೆ. ಹಿಂದುಗಳ ಹುಟ್ಟು ಎಲ್ಲಿಂದಲೇ ಇವರಿಗೆ ತಿಳಿದಿಲ್ಲ. ಅಯೋಧ್ಯೆಯಲ್ಲಿ ಕಲ್ಲಿನ ಮೂರ್ತಿ ಮಾಡಿ ಇಟ್ಟ ಕೂಡಲೇ ಅಲ್ಲಿಗೆ ರಾಮ ಬರುತ್ತಾನೆಯೇ..? ಮಸೀದಿಯನ್ನು ಒಡೆದು ಡೆಕೋರೇಶನ್ ಮಾಡಿ ಮಂದಿರ ಕಟ್ಟಬೇಕಿತ್ತೇ.? ರಾಮಾಯಣ, ರಾಮ ಎಲ್ಲ ಕಾಲ್ಪನಿಕ. ಅದನ್ನು ಹೇಗೆ ನಂಬುತ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಮಕ್ಕಳಲ್ಲಿ ಹಿಂದು ಧರ್ಮದ ಬಗ್ಗೆ ಅಪನಂಬಿಕೆ ಬರುವ ರೀತಿ ಮಾಡಿದ್ದಾರೆಂದು ಪೋಷಕರೊಬ್ಬರು ಆರೋಪಿಸಿದ್ದರು.
7 ನೇ ಕ್ಲಾಸಿನ ಮಕ್ಕಳಿಗೆ ಶಿಕ್ಷಕಿ (ಸಿಸ್ಟರ್) ಪ್ರಭಾ ವರ್ಕ್ ಐಸ್ ವರ್ಶಿಪ್ ಎಂಬ ಪಾಠದ ಬಗ್ಗೆ ಮಕ್ಕಳಿಗೆ ಕ್ಲಾಸ್ ನಡೆಸುತ್ತಿದ್ದ ವೇಳೆ ಪಾಠಕ್ಕೆ ಸಂಬಂದಿಸಿದ ವಿಚಾರವನ್ನು ಮಾತನಾಡುವ ಬದಲು ಪಾಠಕ್ಕೆ ಸಂಬಂಧಿಸದ ವಿಚಾರಕ್ಕೆ ಮಕ್ಕಳಜೊತೆ ಮಾತಾಡಿ ಸುದ್ದಿಯಾಗಿದ್ದರು ,ಹಿಂದೂಗಳ ಆರಾಧ್ಯ ದೇವಾ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ಹೇಳಿದ ಪರಿಣಾಮ ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದೂ ಸಂಘಟನೆ ಜೆರೊಸಾ ಶಾಲೆಗೆ ಶನಿವಾರ ಮುತ್ತಿಗೆ ಹಾಕಿದ್ದು ಶಿಕ್ಷಕಿಯ ವಿರುದ್ದ ಕ್ರಮ ಕೆಗೆದುಕೊಳ್ಳುಬಂತೆ ಒತ್ತಾಯಿಸಿತ್ತು .
ಸೋಮವಾರದಂದು ಶಾಲೆಯ ಆಡಳಿತ ಮಂಡಳಿ ಶಿಕ್ಷಕಿಯ ಹೇಳಿಕೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿ ವಿಚಾರವನ್ನು ಮರೆಮಾಚಲು ಯತ್ನಿಸಿತ್ತು ,ಆದರೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ವೇದವ್ಯಾಸ್ ಕಾಮತ ಉತ್ತರ ಕ್ಷೆತ್ರದ ಶಾಸಕರು ಭಾರತ್ ಶೆಟ್ಟಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ದೌಡಾಹಿಸಿದ್ದು ಶಾಲೆಗೆ ಮತ್ತೊಮ್ಮೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ . ಬುಧವಾರದವರೆಗೆ ಶಾಲೆಯ ಆಡಳಿತ ಮಂಡಳಿಗೆ ಹಿಂದೂ ಸಂಘಟನೆ ಹೆಚ್ಚರಿಸಿ ಸಮಯಕೊಟ್ಟಿದು ಈ ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ವಿರುದ್ಧ ಸರಿಯಾ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಹಿಂದೂ ಸಂಘಟನೆ ಹೆಚ್ಚರಿಸಿದೆ.


