ಹೋಬರ್ಟ್: ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಮುಂಬರುವ T20 ವಿಶ್ವಕಪ್ ಅವರ ಅದ್ಭುತ ಕ್ರಿಕೆಟ್ ಪ್ರಯಾಣದ ಅಂತ್ಯ ಎಂದು ಖಚಿತಪಡಿಸಿದ್ದಾರೆ.
ವಾರ್ನರ್ ಈಗಾಗಲೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ವಾರ್ನರ್ ಭಾರತದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದ್ದರು. ಜನವರಿಯಲ್ಲಿ ಕೊನೆಗೊಂಡ ಪಾಕಿಸ್ತಾನ ವಿರುದ್ಧದ ಸರಣಿಯ ಕೊನೆಯ ಟೆಸ್ಟ್ ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು.
ಆಸ್ಟ್ರೇಲಿಯಾ ಪರ 100 ನೇ T20 ಪಂದ್ಯವಾಡಿದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, ವೆಸ್ಟ್ ಇಂಡೀಸ್ ವಿರುದ್ಧದ ಈ ಪ್ರದರ್ಶನ ಖುಷಿ ನೀಡಿದೆ. ಇನ್ನು ನನ್ನ ಮುಂದಿರುವುದು ಕೇವಲ ತಿಂಗಳು ಮಾತ್ರ. ಹೀಗಾಗಿ ಇದೇ ಫಾರ್ಮ್ ಅನ್ನು ಮುಂದುವರೆಸಲು ಬಯಸುತ್ತೇನೆ. ಏಕೆಂದರೆ T20 ವಿಶ್ವಕಪ್ ಬಳಿಕ ನಾನು T20 ಕ್ರಿಕೆಟ್‌ಗೂ ವಿದಾಯ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
37ರ ವರ್ಷದ ವಾರ್ನರ್ ಜನವರಿ 1 ರಂದು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಲ್ಲದೆ ಜನವರಿ 6 ರಂದು ಕೊನೆಯ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೂ ಗುಡ್ ಬೈ ಹೇಳಿದ್ದರು. ಇದೀಗ ಮುಂಬರುವ T20 ವಿಶ್ವಕಪ್ ಮೂಲಕ ಚುಟುಕು ಕ್ರಿಕೆಟ್‌ಗೂ ವಾರ್ನರ್ ನಿವೃತ್ತಿ ಘೋಷಿಸಿದ್ದಾರೆ.